ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ‘ಕಟ್ಟಪ್ಪ’

ಈ ಸುದ್ದಿಯನ್ನು ಶೇರ್ ಮಾಡಿ

Kattappa--01

ಚೆನ್ನೈಹೈದರಾಬಾದ್, ಏ.21– ವಿಶ್ವದಾದ್ಯಂತ ಸಂಚಲನ ಮೂಡಿಸಿದ ಬಾಹುಬಲಿ ಚಿತ್ರದಲ್ಲಿ ಅಜಾನುಬಾಹು ಕಟ್ಟಪ್ಪ ಪಾತ್ರಧಾರಿಯಾಗಿ ಮಿಂಚಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿದ್ದಾರೆ.  ಕಾವೇರಿ ವಿವಾದದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸತ್ಯರಾಜ್ ಇಂದು ಚೆನ್ನೈನಲ್ಲಿ ಬಹಿರಂಗ ಹೇಳಿಕೆ ನೀಡಿ ಕನ್ನಡಗಿರ ಕ್ಷಮೆ ಕೋರಿದ್ದಾರೆ. ಅಲ್ಲದೆ, ಬಾಹುಬಲಿ-2 ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮತ್ತು ಯಶಸ್ವಿಗೊಳಿಸಲು ಅಕವಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.ಸತ್ಯರಾಜ್ ಕ್ಷಮೆ ಕೋರದ ಹೊರತು ಬಾಹುಬಲಿ-2 ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆಯಾಗಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿ ಏ.28ರಂದು ಕನ್ನಡಪರ ಹೋರಾಟಗಾರ ವಾಟಾಳ್‍ನಾಗರಾಜ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿತ್ತು.
ಕೊನೆಗೂ ಸತ್ಯರಾಜ್ ಅವರು ಕನ್ನಡಿಗರ ಕ್ಷಮೆ ಕೋರಿದ್ದು, ಬಾಹುಬಲಿ-2 ಚಿತ್ರ ಬಿಡುಗಡೆ ಹಾದಿ ಸುಗಮವಾಗಿದೆ. ಜತೆಗೆ ಕನ್ನಡಿಗರ ಸ್ವಾಭಿಮಾನದ ಹೋರಾಟಕ್ಕೆ ಜಯ ಸಂದಿದೆ.
ನಾನು ಕನ್ನಡ ವಿರೋಧಿಯಲ್ಲ. ಕನ್ನಡಿಗರ ಬಗ್ಗೆ ಅಪಾರ ಗೌರವವಿದೆ. ನಾನು ನೀಡಿದ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ. ನನ್ನ ಈ ಹೇಳಿಕೆಯಿಂದಾಗಿ ಬಾಹುಬಲಿ-2 ಚಿತ್ರಕ್ಕೆ ಅಡ್ಡಿಪಡಿಸುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.

ಬಾಹುಬಲಿ ಮೊದಲ ಭಾಗದಲ್ಲಿ ನಾನು ನಿರ್ವಹಿಸಿದ್ದ ಕಟ್ಟಪ್ಪ ಪಾತ್ರಕ್ಕೆ ಕರ್ನಾಟಕದ ಮಂದಿ ಅಪಾರ ಮೆಚ್ಚುಗೆ ಸೂಚಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ನಾನು ಕನ್ನಡಿಗರಿಗೆ ಋಣಿಯಾಗಿದ್ದೇನೆ. ಇದೇ ಬೆಂಬಲ, ಸಹಕಾರವನ್ನು ಎರಡನೇ ಭಾಗಕ್ಕೂ ನೀಡಬೇಕೆಂದು ಕೋರಿದ್ದಾರೆ.  ಕಾವೇರಿ ನದಿ ವಿಷಯಕ್ಕೆ ಸಂಬಂಧಪಟ್ಟಂತೆ ಚಿತ್ರನಟ ಸತ್ಯರಾಜ್ ನೀಡಿರುವ ಹೇಳಿಕೆಗೂ ಮತ್ತು ಬಾಹುಬಲಿ-2 ಚಿತ್ರಕ್ಕೂ ಸಂಬಂಧ ಕಲ್ಪಿಸುವುದು ಬೇಡ ಎಂದು ನಿನ್ನೆಯಷ್ಟೇ ಚಲನಚಿತ್ರ ನಿರ್ದೇಶಕ ರಾಜಮೌಳಿ ಕಳಕಳಿಯಿಂದ ಮನವಿ ಮಾಡಿದ್ದರು. ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕೆಂದು ಅವರು ಕನ್ನಡಪರ ಹೋರಾಟಗಾರರು ಮತ್ತು ಕನ್ನಡ ಪ್ರೇಕ್ಷಕರನ್ನು ವಿನಮ್ರದಿಂದ ಕೋರಿದ್ದರು.ಕನ್ನಡದಲ್ಲಿ ಮಾತನಾಡಿದ್ದ ರಾಜಮೌಳಿ, ಸತ್ಯರಾಜ್ ವೈಯಕ್ತಿಕ ಹೇಳಿಕೆಗೂ ಹಾಗೂ ಬಾಹುಬಲಿ-2 ಚಿತ್ರಕ್ಕೂ ಸಂಬಂಧವಿಲ್ಲ. ಬಾಹುಬಲಿ ಮೊದಲ ಭಾಗಕ್ಕೆ ಕರ್ನಾಟಕ ಜನತೆ ಅಪಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ನಾನು ಕನ್ನಡಿಗರಿಗೆ ಚಿರಋಣಿಯಾಗಿದ್ದೇನೆ ಎಂದು ಮೆಚ್ಚುಗೆ ಸೂಚಿಸಿದ್ದರು.  ಆದರೆ, ಸತ್ಯರಾಜ್ ಅವರ ವೈಯಕ್ತಿಕ ಹೇಳಿಕೆಯ ಕೋಪವನ್ನು ನಮ್ಮ ಈ ಚಿತ್ರದ ಮೇಲೆ ತೋರಿಸುವುದು ಬೇಡ ಎಂದು ಮನವಿ ಮಾಡಿದ್ದ ಅವರು, ಬಹಳ ಕಷ್ಟಪಟ್ಟು ಈ ಚಿತ್ರ ನಿರ್ಮಿಸಿದ್ದೇವೆ. ಇದಕ್ಕೆ ಕರ್ನಾಟಕ ಜನತೆಯ ಬೆಂಬಲ ಅತಿ ಮುಖ್ಯ. ಹಿಂದಿನ ಚಿತ್ರಕ್ಕೆ ನೀಡಿದ ಪ್ರೋತ್ಸಾಹ, ಬೆಂಬಲವನ್ನು ಈ ಚಿತ್ರಕ್ಕೂ ನೀಡಬೇಕೆಂದು ಅವರು ಕೊರಿದ್ದರು.

ಸತ್ಯರಾಜ್‍ಗೆ ಅಭಿನಂದನೆ:

ಕನ್ನಡಿಗರ ಕ್ಷಮೆಕೋರಿ ಕರ್ನಾಟಕದಲ್ಲಿ ಬಾಹುಬಲಿ-2 ಸಿನಿಮಾ ಬಿಡುಗಡೆ ಹಾದಿ ಸುಗಮಗೊಳಿಸಿದ ನಟ ಸತ್ಯರಾಜ್ ಅವರ ಸದ್ಭಾವವನ್ನು ನಿರ್ದೇಶಕ ರಾಜಮೌಳಿ ಮತ್ತು ಚಿತ್ರ ತಂಡ ಪ್ರಶಂಸಿಸಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin