ಕೊನೆಗೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಪೂರ್ಣ : ಹೊರಬಿತ್ತು ಪಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiha-CM

ಬೆಂಗಳೂರು, ಅ.26- ತೀವ್ರ ಕಗ್ಗಂಟಾಗಿದ್ದ ನಿಗಮ-ಮಂಡಳಿ ನೇಮಕಾತಿ ಪೂರ್ಣಗೊಂಡಿದ್ದು, ಇಂದು 21 ಶಾಸಕರು ಹಾಗೂ 70 ಕಾರ್ಯಕರ್ತರನ್ನು ನೇಮಿಸಿರುವ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಪಟ್ಟಿ ಪ್ರಕಟವಾಗಿದೆ. ಸದ್ಯದಲ್ಲೇ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಜರುಗಲಿದ್ದು, ಶಾಸಕರ ಅತೃಪ್ತಿ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 21 ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನೇಮಕಗೊಂಡಿರುವ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಹಿರಿಯ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಕೆ.ವೆಂಕಟೇಶ್, ರಾಜಶೇಖರ್ ಪಾಟೀಲ್, ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಸದ್ಯಕ್ಕೆ 21 ಮಂದಿ ಶಾಸಕರಿಗೆ ಮಾತ್ರ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಒಲಿದಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕೆಲ ದಿನಗಳ ಹಿಂದೆ ನವದೆಹಲಿಗೆ ತೆರಳಿ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಶಾಸಕರ ಅತೃಪ್ತಿ ಸ್ಫೋಟಗೊಳ್ಳುವ ಮೊದಲೇ ನಿಗಮ-ಮಂಡಳಿಗೆ ನೇಮಕ ಮಾಡುವಂತೆ ಸ್ವತಃ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಸಲಹೆ ಮಾಡಿದ್ದರು. ಆದರೆ, ನಿಗಮ-ಮಂಡಳಿಗೆ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆದಿದ್ದು, ಮತ್ತೊಂದೆಡೆ ಕೆಲವರು ಈ ಗಂಜಿ ಕೇಂದ್ರ ತಮಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಸಾಕಷ್ಟು ಅಳೆದು ತೂಗಿ ಸಿಎಂ ಸದ್ಯಕ್ಕೆ ಕೆಲವರಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡುವುದರ ಮೂಲಕ ಮೂಗಿಗೆ ತುಪ್ಪ ಸವರಿದ್ದಾರೆ.

ಪಟ್ಟಿ:

 • ಮಾಲೀಕಯ್ಯ ಗುತ್ತೇದಾರ್- ಕರ್ನಾಟಕ ಗೃಹ ಮಂಡಳಿ
 • ಆರ್.ವಿ.ದೇವರಾಜ್- ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
 • ಕೆ.ವೆಂಕಟೇಶ್- ಬಿಡಿಎ
 • ರಾಜಶೇಖರ್ ಬಿ.ಪಾಟೀಲ್- ಕರ್ನಾಟಕ ಭೂ ಸೇನಾ ನಿಗಮ
 • ಎನ್.ನಾಗರಾಜ್ (ಎಂಟಿಬಿ)- ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
 • ಫಿರೋಜ್ ಸೇಠ್- ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
 • ಕೆ.ಗೋಪಾಲ್ ಪೂಜಾರಿ- ಅರಣ್ಯಾಭಿವೃದ್ಧಿ ನಿಗಮ
 • ಪುಟ್ಟರಂಗಶೆಟ್ಟಿ- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
 • ರಹೀಂ ಖಾನ್- ರಾಜ್ಯ ಉಗ್ರಾಣ ನಿಗಮ
 • ಕೆ.ವಸಂತ ಬಂಗೇರ- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
 • ಬಿ.ಆರ್.ಯಾವಗಲ್- ಹಟ್ಟಿ ಚಿನ್ನದ ಗಣಿ
 • ಎಂ.ಕೆ.ಸೋಮಶೇಖರ್- ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮ
 • ಜಿ.ಎಸ್.ಪಾಟೀಲ- ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
 • ಶಿವಾನಂದ ಎಸ್.ಪಾಟೀಲ್- ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
 • ಹಂಪನಗೌಡ ಬಾದರ್ಲಿ- ಎಂಎಸ್‍ಐಎಲ್
 • ಎಚ್.ಆರ್.ಹಲಗೂರ್- ಸಾಬೂನು ಮತ್ತು ಮಾರ್ಜಕ ನಿಗಮ
 • ಡಿ.ಸುಧಾಕರ್- ಕಿಯೋನಿಕ್ಸ್
 • ಬಾಬುರಾವ್ ಚಿಂಚನಸೂರ್- ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
 • ಶಾರದಾ ಮೋಹನಶೆಟ್ಟಿ- ಕರಾವಳಿ ಅಭಿವೃದ್ಧಿ ಪ್ರಾಧಿಕಾರ
 • ಎನ್.ವೈ.ಗೋಪಾಲಕೃಷ್ಣ- ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ
 • ಹಂಪ ನಾಯಕ್- ಕಾಡಾ ಅಧ್ಯಕ್ಷರು, ತುಂಗಭದ್ರ ಯೋಜನೆ

List-1

List-1a

List-2

List-3

Facebook Comments

Sri Raghav

Admin