ಪತ್ತೆಯಾಯ್ತು ನಟ ರಾಘವ್ ಉದಯ್ ಮೃತದೇಹ, ಅನಿಲ್ ಗಾಗಿ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Uday-Body

ಬೆಂಗಳೂರು, ನ.9-ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೆಲಿಕ್ಯಾಪ್ಟರ್ ನಿಂದ ಜಿಗಿದು ಸಾವಗೀಡಾಗಿರುವ ಸಾಹಸ ಕಲಾವಿದ ಉದಯ್ ಅವರ ಶರೀರವನ್ನು ನೀರಿನಿಂದ ಮಧ್ಯಾಹ್ನ ಹೊರತೆಗೆಯಲಾಗಿದೆ. ಕಳೆದ ಎರಡು ದಿನಗಳಿಂದ ನಿರಂತರ ಹುಡುಕಾಟ ನಡೆಸಿ ಕೊನೆಗೆ ಕಳೆದ ರಾತ್ರಿ ಶವವಿರುವ ಸ್ಥಳವನ್ನು ಗುರುತಿಸುವಲ್ಲಿ ಎನ್‍ಡಿಆರ್‍ಎಫ್ ತಂಡ ಯಶಸ್ವಿಯಾಗಿದ್ದು, ಶವಗಳನ್ನು ಹೊರತೆಗೆಯಲು ಸಾಕಷ್ಟು ಹರಸಾಹಸಪಡಬೇಕಾಯಿತು. ಶವವನ್ನು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ತಯಾರಿ ನಡೆಸಲಾಗುತ್ತಿದೆ. ಉದಯ್ ಅಂತಿಮ ದರ್ಶನಕ್ಕಾಗಿ ಕುಟುಂಬವರ್ಗದವರು, ಸಾರ್ವಜನಿಕರು ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಮತ್ತೊಬ್ಬ ಕಲಾವಿದ ಅನಿಲ್ ಶವ ಇನ್ನೂ ಪತ್ತೆಯಾಗಿಲ್ಲ. ಆತನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ತಿಪ್ಪಗೊಂಡನ ಕೆರೆಯಲ್ಲೇ ನಿರ್ಮಿಸಿದ ವಿಶೇಷ ಪೆಂಡಾಲ್ ನಲ್ಲಿ ಉದಯ್ ಶವದ ಮರಣೋತ್ತರ ಪರೀಕ್ಷೆ , ನಂತರ ಕುಟುಂಬದವರಿಗೆ ಶವ ವರ್ಗಾವಣೆ ಮಾಡಲಾಗಿದೆ. ಮಾಹಿತಿಗಳ ಪ್ರಕಾರ ಇಂದುಅ ಅಥವಾ ನಾಳೆ ಉದಯ್ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ದೇಹ ಸಿಕ್ಕಾಗ ಅದು ಉದಯ್ ನಡ್ಡೋ ಅಥವಾ ಅನಿಲ್ ಅವರದ್ದೋ ಎಂಬ ಗೊಂದಲವಿತ್ತು. ನಟ ದುನಿಯಾ ವಿಜಯ್ ಮತ್ತು ಉದಯ್ ಮನೆಯವರಿಂದ ಅದು ಉದಯ್ ಶವ ಎಂದು ಗುರು ಹಿಡಿದರು, ಉದಯ್ ಉದ್ದವಾದ ಕೂದಲು ಬಿಟ್ಟಿದ್ದ ಆಧಾರದ ಮೇಲೆ ಶವ ಉದಯ್ ಅವರನ್ನು ಅಂದು ಖಚಿತಪಡಿಸಲಾಯಿತು.

ಅನಿಲ್ ಶವಕ್ಕಾಯಾಗಿ ಹುಡುಕಾಟ ಮುಂದುವರೆದಿದ್ದು ಸದ್ಯದಲ್ಲೇ ಶವವನ್ನು ಹೂವುಕಿತರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಅನಿಲ್ ಶವ ಸಿಕ್ಕರೆ ನಾಳೆ ಉದಯ್ ಹಾಗೂ ಹಾಗೂ ಅನಿಲ್ ರನ್ನು ಒಟ್ಟಿಗೆ ಶವ ಸಂಸ್ಕಾರ ಮಾಡಲಾಗುವುದು ಎನ್ನಲಾಗಿದೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ  ಮುಗಿಲು ಮುಟ್ಟಿದ್ದು ಇತ್ತ ಉದಯ್ ಮನೆಯ್ಲಲೂ ಸಂಬಂಧಿಕರ ಗೋಳು ನೋಡತೀರದಂತಾಗಿದೆ .

► Follow us on –  Facebook / Twitter  / Google+

Facebook Comments

Sri Raghav

Admin