‘ಕೊನೆಗೂ ಪ್ರಯತ್ನಕ್ಕೆ ಸಿಕ್ಕಿತು ಫಲ’ : 9 ಹೆಣ್ಣು ಮಕ್ಕಳ ನಂತರ ಹುಟ್ಟಿದ ವಂಶೋದ್ಧಾರಕ..?

ಈ ಸುದ್ದಿಯನ್ನು ಶೇರ್ ಮಾಡಿ

Baby

ತುಮಕೂರು, ಮಾ.25- ವಂಶೋದ್ಧಾರಕನಿಗಾಗಿ ದಂಪತಿ ಮಾಡಿದ ಸತತ ಪ್ರಯತ್ನ ಕೊನೆಗೂ ಫಲ ನೀಡಿದೆ. ಗಂಡು ಮಗು ಬೇಕು ಎಂದು ದಂಪತಿ ಸತತ 9 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಕೊನೆಯ 10ನೆ ಮಗುವಾಗಿ ಗಂಡುಮಗು ಜನನವಾಗಿದ್ದು, ದಂಪತಿಗಳು ಫುಲ್ ಖುಷ್ ಆಗಿದ್ದಾರೆ. ಜಿಲ್ಲೆಯ ಮಧುಗಿರಿ ತಾಲೂಕಿನ ಕುರಿಕೇನಹಳ್ಳಿಯ ನಿವಾಸಿಯಾದ ಭಾಗ್ಯಮ್ಮ (42), ರಾಮಕೃಷ್ಣ (47) ದಂಪತಿ ನಮಗೊಬ್ಬ ವಂಶೋದ್ಧಾರಕ ಬೇಕು, ನಮಗೆ ಬರೀ ಹೆಣ್ಣು ಮಕ್ಕಳಿವೆ ಎಂದು ಬೇಸರಗೊಂಡು ಸತತ 9 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.

ರಾಮಕೃಷ್ಣನ ಸ್ನೇಹಿತರು ನಿಮಗೆ ಗಂಡು ಮಗು ಆಗುವುದಿಲ್ಲ ಎಂದು ಟೀಕಿಸಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ದಂಪತಿ ಕಡೆಗೂ 10ನೆ ಮಗುವಾಗಿ ವಂಶೋದ್ಧಾರಕನನ್ನು ಪಡೆದು ಸಂತೋಷದಿಂದ ಬೀಗಿದ್ದಾರೆ. ನಿನ್ನೆ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ ಭಾಗ್ಯಮ್ಮ ಸಂತಸ ವ್ಯಕ್ತಪಡಿಸಿದ್ದು, 10ನೆ ಮಗುವಾದರೂ ಗಂಡು ಮಗುವಾಗಿದೆ ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಆದರೆ, ಈ 9 ಹೆಣ್ಣು ಮಕ್ಕಳ ನಿರ್ವಹಣೆ ಬಗ್ಗೆ ಇದೀಗ ಚಿಂತೆ ಮಾಡುವಂತಾಗಿದೆ. 9 ಹೆಣ್ಣು ಮಕ್ಕಳನ್ನು ಸಾಕುವುದೇ ಕಷ್ಟ. ಇವರ ಶಿಕ್ಷಣ, ಮದುವೆ, ಜೀವನ ಭದ್ರತೆ ಕಲ್ಪಿಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಬಡತನದ ನಡುವೆಯೂ ಗಂಡು ಮಗು ಹೆತ್ತಿದ್ದಾರಲ್ಲ ಎಂದು ಗ್ರಾಮಸ್ಥರು ಬಾಯಿ ಮೇಲೆ ಬೆರಳಿಟ್ಟುಕೊಂಡು ತಮ್ಮ ಗ್ರಾಮದಲ್ಲಿ ನಡೆದ ಈ ಅಪರೂಪದ ಘಟನೆಯನ್ನು ಎಲ್ಲರಿಗೂ ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ 10 ಮಕ್ಕಳ ದಂಪತಿ ಕೂಡ ಎಲ್ಲರೂ ಬಂದು ನೋಡುತ್ತಿರುವುದನ್ನು ನೋಡಿ ನಾಚಿಕೊಳ್ಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin