ಕೊನೆಗೂ ಬದುಕಲಿಲ್ಲ ‘ಸಿದ್ದ’

ಈ ಸುದ್ದಿಯನ್ನು ಶೇರ್ ಮಾಡಿ

Sidda-Elephant

ರಾಮನಗರ. ಡಿ. : ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಬಳಿ, ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಾಡಾನೆ ಸಿದ್ಧ ಮೃತಪಟ್ಟಿದ್ದಾನೆ.  ಕಳೆದ ಆಗಸ್ಟ್ 30 ರಂದು ಕಾಡಿನಿಂದ ಬಂದಿದ್ದ ಆನೆ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದು, ಸಮೀಪದ ರಾಗಿ ಹೊಲದಲ್ಲಿಯೇ ಬಿದ್ದು ನರಳಾಡುತ್ತಿತ್ತು. ಅದಕ್ಕೆ ಗ್ರಾಮಸ್ಥರು ಅಲ್ಲೇ ಉಪಚರಿಸಿ, ಆಹಾರ ನೀಡಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆಹಾರ ಒದಗಿಸಿದ್ದರು. ಬನ್ನೇರುಘಟ್ಟ ವನ್ಯಜೀವಿ ವಿಭಾಗದ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರು. ಅಲ್ಲದೇ ಹೊರ ರಾಜ್ಯದ ತಜ್ಞರಿಂದಲೂ ಚಿಕಿತ್ಸೆ ಕೊಡಿಸಲಾಗಿತ್ತು.

ಆದರೂ ಸಿದ್ಧ ಚೇತರಿಸಿಕೊಂಡಿರಲಿಲ್ಲ. ಸೇನೆಯಿಂದ ಸೇಫ್ಟಿ ಟವರ್ ನಿರ್ಮಿಸಿ ಸಿದ್ಧನನ್ನು ಆರೈಕೆ ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸಿದ್ದನ ಆರೋಗ್ಯಕ್ಕಾಗಿ ಜನರು ಹೋಮ ಹವನಗಳನ್ನೂ ಸಹ ಮಾಡಿ ಪ್ರಾರ್ಥಿಸಿಕೊಂಡಿದ್ದರು. ಸುಮಾರು ದಿನಗಳ ಚಿಕಿತ್ಸೆ ಬಳಿಕ ಸಿದ್ದ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗುತ್ತಿತ್ತು. ಆದರೆ ಇಂದು ಅವನು ಸಾವನ್ನಪ್ಪಿರುವ ಸುದ್ದಿ ಬಂದಿದೆ.

ಆಗಸ್ಟ್‌ 30ರಂದು ಆಹಾರ ಹರಸಿ ಸಾವನದುರ್ಗ ಕಾಡಿನಿಂದ ಬನ್ನೇರುಘಟ್ಟ ಅರಣ್ಯಕ್ಕೆ ತೆರಳುವ ವೇಳೆ ನಾಡಿಗೆ ಬಂದ ಆನೆ ಸಿದ್ದ ಬೆಂಗಳೂರು ದಕ್ಷಿಣ ತಾಲೂಕು ಗೋಪಾಲಪುರದ ಬಳಿಯ ಕಾಲುವೆಯಲ್ಲಿ ಇಳಿದು ಮುಂಭಾಗದ ಬಲಗಾಲಿಗೆ ಪೆಟ್ಟು ಮಾಡಿಕೊಂಡಿತ್ತು.ನಂತರ ಸೆಪ್ಟೆಂಬರ್‌ 3ರಿಂದ ಮಾಗಡಿಯ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲೇ ಆನೆ ವಾಸ್ತವ್ಯವಿತ್ತು. ಆನೆಗೆ ಸ್ಥಳೀಯ ಅರಣ್ಯ ಇಲಾಖೆ ಚಿಕಿತ್ಸೆ ನೀಡಿತ್ತಾದರೂ ಅದು ಉಪಯೋಗವಾಗಿಲ್ಲ. ಕಳೆದ ಕೆಲ ದಿನಗಳಿಂದ ಹಿನ್ನೀರನಲ್ಲೇ ಕಾಲ ಕಳೆಯುತ್ತಿದ್ದ ಸಿದ್ದ ಇಂದು ಕೊನೆಯುಸಿರೆಳೆದಿದ್ದಾನೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin