ಕೊನೆಗೂ ಬಾಡಿಗೆ ವಿಮಾನದಲ್ಲಿ ದೆಹಲಿಗೆ ಬಂದ ‘ಚಪ್ಪಲಿ ಸಂಸದ’ ಗಾಯಕ್ವಾಡ್

ಈ ಸುದ್ದಿಯನ್ನು ಶೇರ್ ಮಾಡಿ

Raveendra

ಮುಂಬೈ/ನವದೆಹಲಿ, ಏ.6-ಕ್ಷುಲ್ಲಕ ಕಾರಣಕ್ಕಾಗಿ ಏರ್‍ಇಂಡಿಯಾ ಹಿರಿಯ ಮ್ಯಾನೇಜರ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ ದೇಶಿಯ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೆ ಒಳಗಾಗಿರುವ ವಿವಾದಾತ್ಮಕ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಕೊನೆಗೂ ವಿಮಾನವೊಂದನ್ನು ಹತ್ತುವಲ್ಲಿ ಸಫಲರಾಗಿದ್ದಾರೆ.  ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ದುಬಾರಿ ಬೆಲೆ ತೆತ್ತು ಬಾಡಿಗೆ ವಿಮಾನವೊಂದರಲ್ಲಿ ದೆಹಲಿಗೆ ಪ್ರಯಾಣಿಸಿದರು. ಎರಡು ವಾರಗಳ ಹಿಂದೆ ವಿಮಾನಯಾನದ ವೇಳೆ ಬಿಸಿನೆಸ್ ಕ್ಲಾಸ್ ಸೀಟ್ ವಿಷಯಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾದ ಹಿರಿಯ ಮಾನ್ಯೇಜರ್ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ನಾನು ಆತನಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದೇನೆ ಎಂದು ಉದ್ದಟತನದಿಂದ ಠೇಂಕರಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin