ಕೊನೆ ಕ್ಷಣದವರೆಗೂ ಕಾದು ನೋಡುವೆ : ಶಿವಮೂರ್ತಿ ನಾಯ್ಕ್

ಈ ಸುದ್ದಿಯನ್ನು ಶೇರ್ ಮಾಡಿ

Mayakonda-shivamurthy

ಬೆಂಗಳೂರು, ಏ.16- ತಮಗೆ ಟಿಕೆಟ್ ಕೈ ತಪ್ಪಲು ಕೆಲವು ಕಾಂಗ್ರೆಸ್ ನಾಯಕರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಾಯ ಕೊಂಡ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್, ಕೊನೆ ಕ್ಷಣದವರೆಗೂ ಕಾಂಗ್ರೆಸ್‍ನ ನಿರ್ಧಾರವನ್ನು ಕಾದುನೋಡುತ್ತೇನೆ. ಅಂತಿಮವಾಗಿ ನಾನು ನನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ಕೆಲವು ನಾಯಕರು ಮತ್ತು ರಾಜ್ಯಮಟ್ಟದ ಕೆಲವು ಪ್ರಭಾವಿಗಳು ವ್ಯವಸ್ಥಿತ ಹುನ್ನಾರ ನಡೆಸಿ ನನಗೆ ಟಿಕೆಟ್ ಸಿಗದಂತೆ ವಂಚಿಸಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ವಿಧಾನಸಭೆಯಲ್ಲೂ ನನ್ನ ಸಕ್ರಿಯ ಪಾಳ್ಗೊಳ್ಳುವಿಕೆ ಉತ್ತಮವಾಗಿದೆ. ಹಲವಾರು ಸಮಸ್ಯೆಗಳ ವಿಷಯದಲ್ಲಿ ನಾನು ಗಂಭೀರ ಚರ್ಚೆ ಮಾಡಿದ್ದೇನೆ. ಅದನ್ನು ಸಹಿಸಲು ಕೆಲವರಿಗೆ ಸಾಧ್ಯವಾಗಿಲ್ಲ. ಮುಂದೆ ನಾನು ಗೆದ್ದು ಬಂದರೆ ಮಂತ್ರಿ ಸ್ಥಾನ ಕೇಳುತ್ತೇನೆ. ಆಗ ತಮಗೇ ಅವಕಾಶ ಇಲ್ಲದಂಗಾಗುತ್ತದೆ ಎಂದು ಕೆಲವು ಸ್ವಾರ್ಥ ನಾಯಕರು ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿಸಿದ್ದಾರೆ. ನಾನು ಇದನ್ನೆಲ್ಲ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುತ್ತೇನೆ. ಹೈಕಮಾಂಡ್ ನನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ವಿಶ್ವಾಸವಿದೆ. ಇಲ್ಲವಾದರೆ ಮುಂದಿನ ದಾರಿಯ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin