ಕೊಪ್ಪಳ ಬಳಿ ಡೀಸೆಲ್ ಟ್ಯಾಂಕರ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಯಾದಗಿರಿ/ ಕೊಪ್ಪಳ, ಫೆ.8- ಡೀಸೆಲ್ ಟ್ಯಾಂಕರ್ ಹಾಗೂ ಟ್ರ್ಯಾಕ್ಟರ್ ನಡುವೆ ಕೊಪ್ಪಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಯಾದಗಿರಿಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಕೊಪ್ಪಳ:

ಇಂದು ಮುಂಜಾನೆ ಬನ್ನಿಕೊಪ್ಪ ಗ್ರಾಮದಿಂದ ತಳಕಲ್ ಕಡೆಗೆ ಚನ್ನಪ್ಪ ಹಡಪದ ಎಂಬುವರ ಹೊಲಕ್ಕೆ ಕಡಲೆ ಕೀಳಲು ಏಳು ಮಂದಿ ಟ್ರ್ಯಾಕ್ಟರ್‍ನಲ್ಲಿ ಹೋಗುತ್ತಿದ್ದರು. ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಳಕಲ್ ತನ್ನಿಕೊಪ್ಪ ಗ್ರಾಮದ ಬಳಿ ಗದಗದ ಕಡೆ ಹೋಗುತ್ತಿದ್ದ ಡೀಸೆಲ್ ಟ್ಯಾಂಕರ್ ಲಾರಿಯು ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್‍ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಮೃತರನ್ನು ಬನ್ನಿಕೊಪ್ಪ ಗ್ರಾಮದ ಚನ್ನಪ್ಪ ಈರಪ್ಪ ಹಡಪದ (32) , ಮೊಹಮದ್ ರಾಜಾಸಾಬ ಕವಲೂರ (20), ಈರಮ್ಮ ಹಡಪದ (30), ಮೌಲಾಬಿ (40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಮೂವರನ್ನು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

WhatsApp Image 2018-02-08 at 9.56.07 AM

ಅಪಘಾತ ಸಂಭವಿಸಿದಾಗ ಟ್ಯಾಂಕರ್ ಲಾರಿಯೂ ಉರುಳಿ ಬಿದ್ದು ಅಧಿಕ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿದೆ. ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕೂಕನೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಕ್ರೇನ್ ಮೂಲಕ ಎರಡೂ ವಾಹನಗಳನ್ನು ತೆರವುಗೊಳಿಸಿ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

WhatsApp Image 2018-02-08 at 9.56.05 AM

ಯಾದಗಿರಿ:

ಅತಿ ವೇಗವಾಗಿ ಮುನ್ನುಗ್ಗಿದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಸಂತೋಷ್ (34) ಮತ್ತು ಗಿರಿಜಾ ಎಂದು ಗುರುತಿಸಲಾಗಿದೆ. ಸಂತೋಷ ಬೈಕ್‍ನಲ್ಲಿ ಗಿರಿಜಾ ಅವರೊಂದಿಗೆ ಹೋಗುತ್ತಿದ್ದಾಗ ಯಾದಗಿರಿ ಜಿಲ್ಲೆಯ ಶಹಪುರ ನಗರದ ಬಳಿ ಅತಿ ವೇಗವಾಗಿ ಮುನ್ನುಗ್ಗಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.  ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

Facebook Comments

Sri Raghav

Admin