ಕೊರಟಗೆರೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೇಲೆ ಎಫ್‍ಐಆರ್ ದಾಖಲು, ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

FIR--02

ತುಮಕೂರು, ಜ.17- ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು ಕೊರಟಗೆರೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವೈ.ಎಚ್. ಹುಚ್ಚಯ್ಯನವರ ಮೇಲೆ ಎಫ್‍ಐಆರ್ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ.ಪರಮೇಶ್ವರ್ ಅವರ ಬಗ್ಗೆ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಮಾತನಾಡಿರುವುದಲ್ಲದೆ ಅವರು ಒಳಮೀಸಲಾತಿ ವಿರೋಧಿ ಎಂದು ಬಿಂಬಿಸಿ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದರು.

ಹುಚ್ಚಯ್ಯನವರು ಚುನಾವಣೆ ಪ್ರಚಾರದ ಜೊತೆಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಅದನ್ನು ಬಿಟ್ಟು ಪರಮೇಶ್ವರ್ ಅವರನ್ನು ಒಳಮೀಸಲಾತಿ ವಿರೋಧಿ ಎಂಬ ಬಿಂಬಿಸಲು ಹೊರಟಿದ್ದಾರೆ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕೂಡಲೇ ಹುಚ್ಚಯ್ಯನವರು ಕ್ಷಮೆಯಾಚಿಸಬೇಕು. ಅವರನ್ನು ಬಂಧಿಸಿ ಶಿಸ್ತುಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೇ ಇಂದೇ ಕೋರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಒಬ್ಬ ಕೇಂದ್ರ ಸಚಿವರು ಸಂವಿಧಾನವನ್ನು ಬದಲಿಸಬೇಕೆಂದು ಹೇಳಿದ್ದಾರೆ. ಮತ್ತಿಬ್ಬರು ಅವಾಚ್ಯ ಶಬ್ದಗಳಿಂದ ಮಾತನಾಡುತ್ತಾರೆ. ಇಲ್ಲಿ ಹುಚ್ಚಯ್ಯನವರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಇದನ್ನೇ ಬಿಜೆಪಿ ಸಂಸ್ಕøತಿ ಎಂದು  ಕಿಡಿಕಾರಿದ್ದಾರೆ. ರಾಜಕೀಯದ ದುರುದ್ದೇಶದಿಂದ ಅನಗತ್ಯವಾಗಿ ಪರಮೇಶ್ವರ್ ಅವರು ಒಳಮೀಸಲಾತಿ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.

ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾಧ್ಯಕ್ಷ ಲಿಂಗರಾಜು ಮಾತನಾಡಿ ಇಡೀ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಜ್ಜನ ರಾಜಕಾರಣಿ ಎಂದು ಹೆಸರಾಗಿರುವ ಪರಮೇಶ್ವರ್ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿರುವುದು ಸರಿಯಲ್ಲ. ಎಡ ಸಮುದಾಯಕ್ಕೆ ಅವರು ಹೆಚ್ಚು ಒತ್ತು ನೀಡಿದ್ದಾರೆ. ಅದನ್ನು ಮನಗಂಡು ಮಾತನಾಡುವಂತೆ ತಿಳಿಸಿದರು.  ಕೋರ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಗ್ರಾಪಂ ಸದಸ್ಯ ರಾಜು ಮಾತನಾಡಿ, ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿರುವ ಹುಚ್ಚಯ್ಯನವರು ನಿನ್ನೆ ನಮ್ಮ ಮನೆ ಬಳಿ ಬಂದು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ನನ್ನನ್ನು ಕೇಳಿ ಕೊಂಡರು. ಈ ಸಂದರ್ಭದಲ್ಲಿ ಪರಮೇಶ್ವರ್ ವಿರುದ್ಧ ಮಾತನಾಡಿ ಅವರು ಕ್ಷೇತ್ರಕ್ಕೆ ಬರುವುದಿಲ್ಲ, ಯಾರ ಕೈಗೂ ಸಿಗುವುದಿಲ್ಲ, ಅವರೊಬ್ಬ ಹೈಟೆಕ್ ರಾಜಕಾರಣಿ ಅಲ್ಲದೆ ಒಳ ಮೀಸಲಾತಿ ವಿರೋಧಿ ಎಂದಾಗ ನಾನು ದಾಖಲೆ ಕೇಳಿದೆ. ಆಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin