ಕೊಲಂಬಿಯಾದಲ್ಲಿ ಐತಿಹಾಸಿಕ ಶಾಂತಿ ಒಪ್ಪಂದ
ಈ ಸುದ್ದಿಯನ್ನು ಶೇರ್ ಮಾಡಿ
ಹವಾನ, ಆ.25– ಬಹುತೇಕ ಅರ್ಧ ಶತಮಾನಗಳ ಕಾಲ ನಾಗರಿಕ ದಂಗೆಯಿಂದ ಜರ್ಝರಿತವಾಗಿದ್ದ ಹಿಂಸಾಚಾರ ಪೀಡಿತ ಕೊಲಂಬಿಯಾದಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಮುನ್ನಡಿ ಬರೆಯಲಾಗಿದೆ. ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ಸಿ ಬಂಡುಕೋರರು ಚಾರಿತ್ರಿಕ ಶಾಂತಿ ಒಡಂಬಡಿಕೆ ಮಾಡಿಕೊಂಡಿರುವುದಾಗಿ ಘೋಷಿಸಿದ್ದು, 50 ವರ್ಷಗಳ ಅಶಾಂತಿ ಮತ್ತು ಹಿಂಸಾಚಾರಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ. ದ್ವೀಪರಾಷ್ಟ್ರ ಕ್ಯೂಬಾದಲ್ಲಿ ನಾಲ್ಕು ವರ್ಷಗಳ ಶಾಂತಿ ಮಾತುಕತೆ ನಂತರ ಉಭಯ ಬಣಗಳು ಸೌಹಾರ್ದಯುತ ಮಾತುಕತೆ ನಡೆಸಿ ಅಂತಿಮ ಶಾಂತಿ ಒಪ್ಪಂದಕ್ಕೆ ಬರುವಲ್ಲಿ ಸಫಲವಾದವು. ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ಸಿ ನಾವು ಅಂತಿಮ, ಪುರ್ಣ ಮತ್ತು ನಿಖರ ಒಪ್ಪಂದಕ್ಕೆ ಬಂದಿದ್ದೇವೆ. ಬಿಕ್ಕಟ್ಟನ್ನು ಶಮನಗೊಳಿಸಿ ಕೊಲಂಬಿಯಾದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ನಿನ್ನೆ ಉಭಯ ಬಣಗಳು ಜಂಟಿ ಹೇಳಿಕೆ ನೀಡಿವೆ.
► Follow us on – Facebook / Twitter / Google+
Facebook Comments