ಕೊಲಂಬಿಯಾದಲ್ಲಿ ಪ್ರವಾಸಿ ದೋಣಿ ದುರಂತ : 9 ಸಾವು, 28 ಮಂದಿ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

Kolumbia--01

ಗೌಟೇಪ್ (ಕೊಲಂಬಿಯಾ), ಜೂ.26- ಪ್ರವಾಸಿಗರ ದೋಣಿಯು ಮುಳುಗಿ 9 ಮಂದಿ ಜಲಸಮಾಧಿಯಾಗಿ, 28 ಜನರು ನಾಪತ್ತೆಯಾಗಿರುವ ಘಟನೆ ವಾಯುವ್ಯ ಕೊಲಂಬಿಯಾದಲ್ಲಿ ಸಂಭವಿಸಿದೆ.  ಗೌಟೇಪ್ ಪ್ರವಾಸಿ ಪಟ್ಟಣದ ಎಲ್ ಪೆನೋಲ್ ನದಿಯಲ್ಲಿ ನಿನ್ನೆ ಈ ದುರ್ಘಟನೆ ಸಂಭವಿಸಿದ್ದು, ವಿಹಾರನೌಕೆ ಮುಳುಗಲು ಕಾರಣ ತಿಳಿದುಬಂದಿಲ್ಲ. ಕೊಲಂಬಿಯಾ ಮತ್ತು ವಿದೇಶಿ ಪ್ರವಾಸಿಗರು ಈ ದೋಣಿಯಲ್ಲಿದ್ದರು.  ಈವರೆಗೆ 9 ಮಂದಿ ಜಲಸಮಾಧಿಯಾಗಿದ್ದಾರೆ. 28ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ಆಂಟಿಯೊಕ್ವಿಯಾ ಪ್ರಾದೇಶಿಕ ಸರ್ಕಾರದ ವಿಪತ್ತು ನಿಯಂತ್ರಣ ಇಲಾಖೆಯ ಮುಖ್ಯಸ್ಥೆ ಮಾರ್ಗರೀಟಾ ಮೊನ್‍ಕಾಡಾ ತಿಳಿಸಿದ್ದಾರೆ.

170 ಪ್ರವಾಸಿಗರಿದ್ದ ದೋಣಿ ಮುಳುಗಿದ ನಂತರ ಬಹುತೇಕ ಮಂದಿಯನ್ನು ಇತರ ದೋಣಿಗಳ ಮೂಲಕ ರಕ್ಷಿಸಲಾಯಿತು ಮತ್ತು ಇನ್ನು ಕೆಲವರು ಸುರಕ್ಷಿತವಾಗಿ ಪಾರಾದರು ಎಂದು ಅವರು ಹೇಳಿದ್ದಾರೆ.   ದುರಂತವು ಕೆಲವೇ ನಿಮಿಷಗಳಲ್ಲಿ ನಡೆದು ಹೋಯಿತು. ನೋಡು ನೋಡುತ್ತಿದ್ದಂತೆ ದೋಣಿ ಜಲಸಮಾಧಿಯಾಯಿತು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಕ್ಯಾಪ್ಟನ್ ಲೂಯಿಸ್ ಬರ್ನಾಡೋ ಮೊರಲೆಸ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin