ಕೊಲಂಬಿಯಾ ರೈತನಿಗೆ ಹೊಲದಲ್ಲಿ ಸಿಕ್ಕಿತು ಕೋಟಿ ಕೋಟಿ ಹಣ..!

ಈ ಸುದ್ದಿಯನ್ನು ಶೇರ್ ಮಾಡಿ

Columbia--01

ಬೊಗೋಟ, ಮಾ.19-ಕೊಲಂಬಿಯಾದಲ್ಲಿ ಹೊಲ ಉಳುತ್ತಿದ್ದ ರೈತನೊಬ್ಬನಿಗೆ ಭಾರೀ ಹಣ ಸಿಕ್ಕಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದರ ಮೌಲ್ಯ 4000 ಕೋಟಿ ರೂ. ಜೋಸ್ ಮಾರಿಯಾನೋ ಕಾಟಿನಲೋಸ್(60) ಎಂಬ ರೈತ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಅದರಲ್ಲಿ ನೀಲಿ ಡಬ್ಬಿಯೊಂದು ಸಿಕ್ಕಿತು. ಅದನ್ನು ತೆರೆದು ನೋಡಿದಾಗ ಕೊಲಂಬಿಯಾದ ಗರಿಗರಿ ಕರೆನ್ಸಿಗಳು ಕಾಣಿಸಿದವು. ಅದೃಷ್ಟ ಒಲಿದರೂ, ಪ್ರಾಮಾಣಿಕನಾದ ಈ ರೈತ ಅದನ್ನು ಅಧಿಕಾರಿಗಳ ಗಮನಕ್ಕೆ ತಂದ. ಈತನ ಪ್ರಾಮಾಣಿಕತೆಗೆ ಮೆಚ್ಚಿ ಸರ್ಕಾರ 3000 ಡಾಲರ್ (2ಲಕ್ಷ ರೂ.) ಇನಾಮು ನೀಡಿತು. ಇದು ಕೊಲಂಬಿಯಾದ ಕುಖ್ಯಾತ ಡ್ರಗ್ ಲಾರ್ಡ್ ಪಾಬ್ಲೊಗೆ ಸೇರಿದ್ದು ಎಂದು ಹೇಳಲಾಗಿದೆ. ಈ ಹಣವನ್ನು ಸಮಾಜಕಲ್ಯಾಣ ಇಲಾಖೆಗೆ ಒಪ್ಪಿಸಲಾಗಿದ್ದು ಜನ ಹಿತ ಕಾರ್ಯಗಳಿಗೆ ಬಳಸಲು ಉದ್ದೇಶಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin