‘ಕೊಲೆಯಾದವರೆಲ್ಲ ನಮ್ಮ ಪಕ್ಷದವರು ಎಂದು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ’ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--Siddaramaiah--

ಬೆಂಗಳೂರು, ಫೆ.2- ಬಿಜೆಪಿಯವರು ಕೊಲೆ ಆದವರನ್ನೆಲ್ಲಾ ನಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜೆ.ಸಿ.ನಗರದಲ್ಲಿ ಕೊಲೆಯಾದ ಸಂತೋಷ್ ಎಂಬ ಯುವಕ ಬಿಜೆಪಿ ಕಾರ್ಯಕರ್ತನಲ್ಲ. ಇತ್ತೀಚೆಗೆ ಸತ್ತವರು, ಕೊಲೆಯಾದವರನ್ನೆಲ್ಲಾ ಬಿಜೆಪಿಯವರು ನಮ್ಮ ಪಕ್ಷದವರು ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೆಲ್ಲಾ ಏನೇ ಇದ್ದರೂ ಕೊಲೆ ಖಂಡನೀಯ. ಯಾರ ಜೀವಕ್ಕೂ ಅಪಾಯವಾಗಬಾರದು. ಇಂತಹ ಪ್ರಕರಣಗಳನ್ನು ನಾವು ಖಂಡಿಸುತ್ತೇವೆ. ಸಂತೋಷ್ ಕೊಲೆ ಪ್ರಕರಣವನ್ನು ಈಗಾಗಲೇ ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಈ ಪ್ರಕರಣದಲ್ಲಿ ಗಾಂಜಾ ವಹಿವಾಟು ನಡೆದಿರುವುದು ಪತ್ತೆಯಾದರೆ ಅದರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

Facebook Comments

Sri Raghav

Admin