ಕೊಲೆ-ಕೊಲೆಯತ್ನ ಪ್ರಕರಣ: 8 ಮಂದಿ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest

ಮಂಡ್ಯ,ಆ.24-ಕಳೆದ ನಾಲ್ಕು ದಿನಗಳ ಹಿಂದೇ ಹಾಡಹಗಲೇ ನಡೆದಿದ್ದ ಕೊಲೆ ಮತ್ತು ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ವೆಂಕಟೇಶ್ ಅಲಿಯಾಸ್ ಪಾಂಡು, ಗುಂಡ, ಗಿರಿ, ಸಂತೋಷ್, ಅವಿನಾಶ್, ಪ್ರಭ, ದತ್ತು, ದಸ್ತಗಿರಿ ಬಂಧಿತ ಆರೋಪಿಗಳು.  ಪಟ್ಟಣದ ಕಿಕ್ಕೇರಿ ರಸ್ತೆಯಲ್ಲಿರುವ ಬಸವೇಶ್ವರ ಟಾಕೀಸ್ ಬಳಿ ಕಳೆದ ಶುಕ್ರವಾರ ಸಂಜೆ ದುಷ್ಕರ್ಮಿಗಳ ಗುಂಪೊಂದು ರಾಜೇಶ್(28) ಎಂಬುವನನ್ನು ಕೊಲೆ ಮಾಡಿದ್ದರು ಮತ್ತು ಆತನ ಜೊತೆಗಿದ್ದ ಸಹೋದರ ನಂಜುಂಡ ಮತ್ತು ಸ್ನೇಹಿತ ವೇಣು ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದರು.

ಇದಾದ ಸ್ವಲ್ಪ ಸಮಯದಲ್ಲೇ ರಾಜೇಶ್ ಕಡೆಯವರಾದ ಆನಂದ್ ಮತ್ತು ರಾಮಣ್ಣ ಎಂಬುವರು ತೀವ್ರವಾಗಿ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಜನತೆ ಬೆಚ್ಚಿಬಿದ್ದದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಕೆ.ಆರ್.ಪೇಟೆ ಪೊಲೀಸರು ತನಿಖೆ ಕೈಗೊಂಡು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಹಾಗೂ ನಿನ್ನೆ ನ್ಯಾಯಾಂಗ ಬಂಧನಕ್ಕೆ ಆರೋಪಿಗಳನ್ನು ಒಪ್ಪಿಸಲಾಗಿದೆ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin