ಕೊಲೆ ಪ್ರಕರಣ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

jail

ಕೆಜಿಎಫ್, ಆ.27- ಮಾರಿಕುಪ್ಪಂ ಪೊಲೀಸ್ ಠಾಣೆ ಸರಹದ್ದಿನಲ್ಲಿ 2011ನೇ ಸಾಲಿನ ಜೂನ್ 27ರಂದು ನಡೆದಿದ್ದ ಅರುಣ್‍ಕುಮಾರ್ ಎಂಬಾತನ ಕೊಲೆ ಪ್ರಕರಣದಲ್ಲಿನ ಕುಖ್ಯಾತ ರೌಡಿಗಳಾದ ಸ್ಟಾಲಿನ್, ಕರ್ಕ ಸುರೇಶ್, ಲೂಯಿಸ್ ಕಾರ್ತಿಕ್ ಎಂಬುವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೆಜಿಎಫ್ ಪೀಠದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.ಮಾರಿಕುಪ್ಪಂನ ಫ್ರಾಂಕ್ ಕೋ ನಿವಾಸಿ ರಾಜಾ ಎಂಬುವರಿಗೂ ರೌಡಿ ಸ್ಟಾಲಿನ್ ಬಿನ್ ಚಾರ್ಲೇಸ್ ಎಂಬುವರಿಗೂ ಹಳೆಯ ದ್ವೇಷವಿದ್ದು, ಸ್ಟಾಲಿನ್ ಮತ್ತಿತರರು ರಾಜಾ ಅವರ ತಮ್ಮ ಅರುಣ್‍ಕುಮಾರ್ ಎಂಬಾತನನ್ನು ಅವರ ಮನೆಯಲ್ಲಿ ಮಲಗಿದ್ದಾಗ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದರು.

ಈ ಸಂಬಂಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.ಆರೋಪಿಗಳಾದ ಸ್ಟಾಲಿನ್, ಕರ್ಕ ಸುರೇಶ್ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕೆಜಿಎಫ್ ಪೀಠದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಜಗದೀಶ್ವರಯ್ಯ ಅವರು ನಿನ್ನೆ ಸಂಜೆ ತೀರ್ಪು ಪ್ರಕಟಿಸಿದರು.ಆರೋಪಿಗಳಾದ ಸ್ಟಾಲಿನ್, ಕರ್ಕ ಸುರೇಶ್, ಲೂಯಿಸ್ ಕಾರ್ತಿಕ್ ಎಂಬುವ ಪ್ರಮುಖ ಆರೋಪಿಗಳಿಗೆ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಎರಡು ಲಕ್ಷದ ಏಳು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಅರುಣ್‍ಕುಮಾರ್ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ಮಗಿ ಕೆ.ಮಗೇಶ್ ಮತ್ತು ಶರತ್ ಅವರುಗಳನ್ನು ಕೂಡಲೇ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ವಿಶೇಷ ಅಪರಾಧ ಪತ್ತೆ ದಳ ರಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ವಿ.ಗೋಪಿನಾಥ್ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin