ಕೊಲ್ಕತಾದ ಫ್ಲಾಟ್‍ನಲ್ಲಿ ಕೊಳೆತ ಶವವಾಗಿ ಪತ್ತೆಯಾದ ಬಂಗಾಳಿ ನಟಿ

ಈ ಸುದ್ದಿಯನ್ನು ಶೇರ್ ಮಾಡಿ

Bengali-Actress

ಕೊಲ್ಕತಾ, ಫೆ.8-ಪಶ್ಚಿಮಬಂಗಾಳದ ರಾಜಧಾನಿ ಕೊಲ್ಕತಾದ ಕಸ್ಬಾ ಪ್ರದೇಶದ ಪ್ಲಾಟ್ ಒಂದರಲ್ಲಿ ಬಂಗಾಳಿ ನಟಿಯೊಬ್ಬಳ ಕೊಳೆತ ಶವ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.  ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಬಿಟಾಸ್ಟಾ ಸಹಾ ಎಂಬ ನಟಿಯ ಕೊಳೆತ ಶವ ಆಕೆಯ ಫ್ಲಾಟ್‍ನ ಛಾವಣಿಗೆ ನೇತು ಹಾಕಿದ ರೀತಿಯಲ್ಲಿ ಪತ್ತೆಯಾಗಿದೆ. ಅಲ್ಲದೇ ಆಕೆಯ ಸೋಂಟದ ಬಳಿ ಅಳವಾಗಿ ಸೀಳಿದ ಗುರುತು ಇದೆ. ಅಲ್ಲದೇ ದೇಹದ ಮೇಲೆ ಹಲವಾರು ಗಾಯಗಳಾಗಿವೆ. ಮರಣೋತ್ರರ ಪರೀಕ್ಷೆ ನಂತರ ಇದು  ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತಿಳಿದು ಬರಲಿದೆ ಎಂದು ಪೊಲೀಸ್ ಆಧಿಕಾರಿಗಳು ಹೇಳಿದ್ದಾರೆ.

ತನ್ನ ತಾಯಿಯಿಂದ ಬೇರ್ಪಟ್ಟು ಫ್ಲಾಟ್‍ನಲ್ಲಿ ಒಬ್ಬೊಂಟಿಯಾಗಿ ಬಟಿಸ್ಟಾ ವಾಸಿಸುತ್ತಿದ್ದರು. ಆಕೆಯ ತಾಯಿ ಹಲವಾರು ಮೊಬೈಲ್ ಫೋನ್‍ಗೆ ಕರೆ ಮಾಡಿದರೂ ಸ್ವೀಕರಿಸಿದೇ ಇದ್ದ ಕಾರಣ ಫ್ಲಾಟ್‍ಗೆ ತೆರಳಿದರು. ಬಾಗಿಲು ತೆಗೆಯದೇ ಇದ್ದಾಗ ಅವರು ಪೊಲೀಸರಿಗೆ ತಿಳಿಸಿದರು. ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಆಕೆಯ ಶವ ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin