ಕೊಳಗೇರಿ ಮಹಿಳೆಯರ ಸುರಕ್ಷತೆಗೆ ಬದ್ಧವಾಗಬೇಕು

ಈ ಸುದ್ದಿಯನ್ನು ಶೇರ್ ಮಾಡಿ

19

ಗದಗ,ಮಾ.10– ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡಲಾಗುತ್ತಿರುವ ವ್ಯವಸ್ಥೆಯಲ್ಲಿ ಅದರಲ್ಲೂ ನಗರ ಬಡತನ ಕಣ್ಣಿಗೆ ರಾಚುವ ಕೊಳಗೇರಿಯ ಮಹಿಳೆಯರ ಪಾಡು ಹೇಳತೀರದಾಗಿದೆ. ಕೊಳಗೇರಿಗಳು ಎಂದಾಕ್ಷಣ ನರಕಗಳಂತಿದ್ದು, ನಮ್ಮ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಗಿರಬೇಕೆಂದು ಯೋಚಿಸಬೇಕು, ಇಂತಹ ವಾತಾವರಣದಲ್ಲಿ ಬದುಕು ನಡೆಸುತ್ತಿರುವ ಮಹಿಳೆಯರ ಸಾಮಾಜಿಕ ಭದ್ರತೆಯ ಜೊತೆಗೆ ಘನತೆ ಮತ್ತು ಸುರಕ್ಷತೆಗಾಗಿ ಸರ್ಕಾರಗಳು ಬದ್ದವಾಗಬೇಕು ಎಂದು ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸ್ಲಂ ಮಹಿಳಾ ಘಟಕದ ಸಂಚಾಲಕಿ ಪರವೀನಬಾನು ಹವಾಲ್ದಾರ ತಿಳಿಸಿದರು.ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಹಕಾರದಲ್ಲಿ ಸ್ಲಂ ಮಹಿಳಾ ಸಮಿತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಕೊಳಗೇರಿ ಮಹಿಳೆಯರಿಗೆ ಕುಡಿಯುವ ನೀರು, ಶೌಚಾಲಯ ಮತ್ತು ಆರೋಗ್ಯ ಯಾಕಿಲ್ಲ ಎಂಬ ಮಹಿಳೆಯರ ಹಕ್ಕೋತ್ತಾಯಗಳ ಪ್ರಚಾರಾಂದೋಲನ ಸಂದರ್ಭದಲ್ಲಿ ಅವರು ಮಾತನಾಡಿದರು.

ಮಹಿಳಾ ಸಮಿತಿ ಮುಖಂಡ ಮೆಹರುನಿಸಾ ಢಾಲಾಯತ ಮಾತನಾಡಿ ಮಹಿಳೆಯರ ರಕ್ಷಣೆಗಾಗಿ ಸರ್ಕಾರಗಳು ಕೋಟ್ಯಾಂತರ ಅನುದಾನ ಖರ್ಚು ಮಾಡುತ್ತಿದೆ. ಆದರೆ ಕೊಳಗೇರಿ ಮಹಿಳೆಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಮಹಿಳಾ ದಿನಾಚರಣೆ ಆಚರಿಸುತ್ತಿರುವ ಸರ್ಕಾರಗಳು ನಿಜವಾಗಲು ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕೊಳಗೇರಿಗಳಲ್ಲಿ ಶೇ. 70ರಷ್ಟು ಶೌಚಾಲಯ ವ್ಯವಸ್ಥೆಗಳಿಲ್ಲದಿರುವುದರಿಂದ ಸ್ವಚ್ಚ ಭಾರತ್ ಅಭಿಯಾನದಲ್ಲಿ ನಮ್ಮ ಸ್ಲಂಗಳಿಗೆ ಮಹಿಳಾ ಶೌಚಾಲಯಕ್ಕೆ ಆದ್ಯತೆ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಸ್ಲಂ ಸಮಿತಿ ಅಧ್ಯಕ ಅಶೋಕ ಮ್ಯಾಗೇರಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಆರ್. ಮಾನ್ವಿ, ಮುಖಂಡ ಇಬ್ರಾಹಿಂ ಮುಲ್ಲಾ, ಅಬುಬಕರ ಮಕಾನದಾರ, ಶಮಶುದ್ದಿನ ಢಾಲಾಯತ, ಮಹಿಳಾ ಸಮಿತಿ ಮುಖಂಡರಾದ ರಾಧಾ ಬೋಡಗಲ್ಲ, ಮಮ್ತಾಜಬೇಗಂ ಮಕಾನದಾರ, ವಿಶಾಲಕ್ಷಿ ಹಿರೇಗೌಡ್ರ, ವಂದನಾ ಶ್ಯಾವಿ, ಗೌರಮ್ಮ ಶಿರಗುಪ್ಪಿ, ಸುಶೀಲಮ್ಮ ಗೊಂದಾರ, ಶಬಾನಾ ಮುಳಗುಂದ, ರಿಹಾನಾಬೇಗಂ ಪಠಾಣ, ಸಾಕ್ರುಬಾಯಿ ಗೋಸಾವಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶಗಳ ನೂರಾರು ಮಹಿಳೆಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin