ಕೊಳವೆ ಬಾವಿ ದುರಂತ : ಕಾವೇರಿ ಕುಟುಂಬಕ್ಕೆ ಶಾಸಕ ಲಕ್ಷ್ಮಣ ಸವದಿಯವರಿಂದ ವೈಯಕ್ತಿಕ ನೆರವು

ಈ ಸುದ್ದಿಯನ್ನು ಶೇರ್ ಮಾಡಿ

Kaveri--0012

ಬೆಳಗಾವಿ, ಏ.25– ಬಾಲಕಿ ಕಾವೇರಿ ಸಾವಿನಿಂದ ಬಹಳ ದುಃಖವಾಗಿದ್ದು, ಆಕೆಯ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ ನೆರವು ನೀಡಲಿದ್ದೇನೆ. ಜತೆಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದ್ದಾರೆ. ಜಂಝರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಸತತ 54 ಗಂಟೆಗಳ ಕಾಲ ದೀರ್ಘ ಕಾರ್ಯಾಚರಣೆ ನಡೆಸಿದ್ದರೂ ಕಾವೇರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇವರು ಬಾಲಕಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.ರಾಜ್ಯದಲ್ಲಿ ಇಂತಹ ಅವಘಡಗಳು ಈ ಹಿಂದೆ ಸಂಭವಿಸಿವೆ. ಈಗಲೂ ನಡೆಯುತ್ತಲೇ ಇವೆ. ಇದಕ್ಕೆ ಉದಾಹರಣೆ ಬಾಲಕಿ ಕಾವೇರಿ ಮೃತಪಟ್ಟಿರುವುದು. ಇನ್ನು ಮುಂದಾದರೂ ಸರ್ಕಾರ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ಜತೆಗೆ ಜನರು ಕೂಡ ಸ್ವಯಂಪ್ರೇರಿತರಾಗಿ ತಮ್ಮ ಜಮೀನಿನಲ್ಲಿರುವ ತೆರೆದ ಕೊಳವೆ ಬಾವಿಗಳನ್ನು ಶೀಘ್ರವೇ ಮುಚ್ಚಬೇಕು ಎಂದು ಹೇಳಿದರು. ಕಳೆದ ರಾತ್ರಿ ಮೃತಪಟ್ಟ ಆರು ವರ್ಷದ ಬಾಲಕಿ ಕಾವೇರಿ ಅಂತ್ಯ ಸಂಸ್ಕಾರ ಆಕೆಯ ಹುಟ್ಟೂರಾದ ಜಂಝರವಾಡದಲ್ಲಿ ನಡೆಯಿತು. ಬಾಲಕಿಯ ಕುಟುಂಬ ವರ್ಗದವರ ಆಕ್ರಂದನ ಮುಗಿಲುಮುಟ್ಟಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin