ಕೊಳ್ಳೇಗಾಲದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

kolegala

ಕೊಳ್ಳೇಗಾಲ,ಆ.16- ಕಳೆದ ನಾಲ್ಕು ದಿನಗಳ ಸತತ ರಜೆಯ ಹಿನ್ನೆಲೆಯಲ್ಲಿ ತಮ್ಮ-ತಮ್ಮ ಸ್ವಗ್ರಾಮಗಳಿಗೆ ಬಂದಿದ್ದ ಬೆಂಗಳೂರಿನ ವಿವಿಧೆಡೆ ಉದ್ಯೋಗ ಮಾಡುತ್ತಿರುವ ಯುವಕ-ಯುವತಿಯರು ಇಂದು ಬೆಂಗಳೂರಿಗೆ ವಾಪಸ್ ತೆರಳಲು ಕೊಳ್ಳೇಗಾಲದ ಬಸ್ ನಿಲ್ದಾಣಕ್ಕೆ ಕಾಲಿಟ್ಟಾಗ ನಿಲ್ದಾಣದಲ್ಲಿ ಬಸ್‍ಗಳಿಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು. ಈ ಅವ್ಯವಸ್ಥೆಯಿಂದ ಬೇಸತ್ತ ಬಹುತೇಕ ಮಂದಿ ಖಾಸಗಿ ಹಾಗೂ ಸರ್ಕಾರಿ ಬಸ್‍ನವರಿಗೆ ಹಿಡಿಶಾಪ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ದಿನಗಳ ಸತತ ರಜೆ ಮುಗಿಸಿ ಬೆಂಗಳೂರಿಗೆ ತೆರಳುವ ಉತ್ಸಾಹದಲ್ಲಿದ್ದವರಿಗೆ ಇಲ್ಲಿನ ಬಸ್ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ಅವರ ಉತ್ಸಾಹವೇ ಕುಂದುವಂತಿತ್ತು. ನಿಲ್ದಾಣದಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಸೂಕ್ತ ಶೌಚಾಲಯದ ವ್ಯವಸ್ಥೆಯಿಲ್ಲದೆ ಶಪಿಸುತ್ತಿದ್ದರು. ಬಸ್ ನಿಲ್ದಾಣವೆಲ್ಲಾ ಧೂಳು ಮಯವಾಗಿ ಪ್ರಯಾಣಿಕರು ಪರದಾಡುತ್ತಿದ್ದರು. ಇದು ಇದೊಂದು ದಿನದ ಪರದಾಟವಲ್ಲ. ಪ್ರತಿ ಜಾತ್ರಾ ವಿಶೇಷ ದಿನಗಳಲ್ಲೂ ಇದ್ದದ್ದೇ. ತಾಲ್ಲೂಕಿನ ಧಾರ್ಮಿಕ ಸ್ಥಳಗಳಾದ ಮಲೆ ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು ಹಾಗೂ ಸಮೀಪದ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟಗಳಲ್ಲಿ ನಡೆಯುವ ಜಾತ್ರಾ ಸಮಯದಲ್ಲೂ ಇದೇ ಗೋಳು.
ಬಸ್ ನಿಲ್ದಾಣದ ಆವರಣ ದುರಸ್ತಿಗೊಳಿಸಿ ಶುಚಿಯಾಗಿಟ್ಟು ಕೊಳ್ಳಲು. ಆದರೆ ನಗರಸಭೆ ಇತ್ತ ತಿರುಗಿಯೂ ನೋಡುವುದಿಲ್ಲ. ಬಸ್ ನಿಲ್ದಾಣದ ಸುತ್ತ ಇರುವ ಮೋರಿಗಳು ಗಬ್ಬು ನಾರುತ್ತಿವೆ ಅವುಗಳನ್ನು ಸ್ವಚ್ಛಗೊಳಿಸುವ ಕನಿಷ್ಠ ಕೆಲಸವನ್ನು ನಗರಸಭೆ ಮಾಡಿಲ್ಲ. ಸಾಕಷ್ಟು ಧಾರ್ಮಿಕ ತಾಣಗಳು, ಪ್ರವಾಸಿ ತಾಣಗಳನ್ನು ಹೊಂದಿರುವ ಕೊಳ್ಳೇಗಾಲ ಪಟ್ಟಣ ವಾಣಿಜ್ಯ ನಗರಿಯೂ ಹೌದು ಇಲ್ಲಿನ ನಗರಸಭೆ ಬಸ್ ನಿಲ್ದಾಣ ಮಾಡುವಲ್ಲಿ ವಿಫಲವಾಗಿರುವ ಬಗ್ಗೆ ಪಟ್ಟಣದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin