ಕೊಳ್ಳೇಗಾಲದಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿದ್ದ ಎನ್.ಮಹೇಶ್‍ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

BSP--01

ಬೆಂಗಳೂರು, ಮೇ 15- ಕರ್ನಾಟಕದಲ್ಲಿ ಬಿಎಸ್‍ಪಿ (ಬಹುಜನ ಸಮಾಜವಾದಿ ಪಕ್ಷ) ತನ್ನ ಖಾತೆ ತೆರೆದಿದೆ.  ಜೆಡಿಎಸ್ ಮೈತ್ರಿಯೊಂದಿಗೆ ಕೊಳ್ಳೇಗಾಲದಲ್ಲಿ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಗೆಲುವು ಸಾಧಿಸಿದ್ದಾರೆ.  ಈ ಮೂಲಕ ಬಿಎಸ್‍ಪಿ ರಾಜ್ಯದಲ್ಲಿ ತನ್ನ ಖಾತೆಯನ್ನು ಆರಂಭಿಸಿದೆ. ಎನ್.ಮಹೇಶ್ ಅವರು  ಬಿಎಸ್‍ಪಿ ರಾಜ್ಯಾಧ್ಯಕ್ಷರಾಗಿದ್ದರು. ಜೆಡಿಎಸ್‍ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಾಗ ಜೆಡಿಎಸ್ ಪಕ್ಷ ಬಿಎಸ್‍ಪಿಗೆ 20 ಸೀಟುಗಳನ್ನು ನೀಡಿತ್ತು. ಕೊಳ್ಳೇಗಾಲದಿಂದ ಎನ್.ಮಹೇಶ್ ಅವರು ಸ್ಪರ್ಧಿಸಿದ್ದು, ಅಲ್ಲಿ ಅವರು ಜಯ ಗಳಿಸಿದ್ದಾರೆ.  [ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]

Facebook Comments

Sri Raghav

Admin