ಕೊಹಿನೂರು ವಜ್ರ ವಾಪಸ್ ತರುವ ಹೊಣೆಯನ್ನು ಕೇಂದ್ರದ ಮೇಲೆ ಹಾಕಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Kohinur

ನವದೆಹಲಿ, ಏ.21- ಇಂಗ್ಲೆಂಡ್‍ನಲ್ಲಿರುವ ವಿಶ್ವದ ಅತ್ಯಂತ ಬೆಲೆ ಬಾಳುವ ಮತ್ತು ಅತಿದೊಡ್ಡ ಕೊಹಿನೂರು ವಜ್ರವನ್ನು ದೇಶಕ್ಕೆ ವಾಪಸ್ ತರುವ ಹೊಣೆಯನ್ನು ಸುಪ್ರೀಂಕೋರ್ಟ್ ಇಂದು ಕೇಂದ್ರ ಸರ್ಕಾರದ ಮೇಲೆ ಹಾಕಿದೆ.  ಯುನೈಟೆಡ್ ಕಿಂಗ್‍ಡಮ್‍ನಲ್ಲಿರುವ ಕೊಹಿನೂರು ವಜ್ರದ ಮರು ಹಕ್ಕು ಪ್ರತಿಪಾದನೆ ಅಥವಾ ಅದರ ಹರಾಜು ನಿಲ್ಲಿಸಲು ಆದೇಶ ಹೊರಡಿಸಲು ತನಗೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಸ್ಪಷ್ಟಪಡಿಸಿದೆ.



ಭಾರತಕ್ಕೆ ಅತ್ಯಮೂಲ್ಯ ವಜ್ರವನ್ನು ವಾಪಸ್ ತರಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಪೀಠ, ವಜ್ರವನ್ನು ಹರಾಜು ಮಾಡದಂತೆ ವಿದೇಶಿ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin