ಕೊಹ್ಲಿಯನ್ನು ಪ್ರಾಣಿಗೆ ಹೋಲಿಸಿದ ಆಸಿಸ್ ಮಾಧ್ಯಮಗಳು

ಈ ಸುದ್ದಿಯನ್ನು ಶೇರ್ ಮಾಡಿ

Virat Kohli

ನವದೆಹಲಿ, ಮಾ.12-ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಅವರ ಡಿಆರ್‍ಎಸ್ ವಿವಾದವನ್ನು ಧ್ವನಿ ಎತ್ತಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಸಿಸ್ ಮಾಧ್ಯಮಗಳು ಪ್ರಾಣಿಗಳಿಗೆ ಹೋಲಿಕೆ ಮಾಡುವ ಮೂಲಕ ಅತಿರೇಕ ವರ್ತನೆ ತೋರಿದ್ದಾರೆ. ಆಸ್ಟ್ರೇಲಿಯಾ ದಿನಪತ್ರಿಕೆಯೊಂದು ವಿರಾಟ್ ಕೊಹ್ಲಿ ಫೋಟೋ ಪಕ್ಕ ಪ್ರಾಣಿ ಫೋಟೋ ಹಾಕಿ ಹೋಲಿಕೆ ಮಾಡಿದ್ದು ವಿವಾದ ಎಬ್ಬಿಸಿದೆ.
ಬೆಂಗಳೂರಿನಲ್ಲಿ ನಡೆದ ಎರಡನೆ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ಬೌಲಿಂಗ್‍ನಲ್ಲಿ ಸ್ಟೀವನ್ ಸ್ಮಿತ್ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು.

ಇದನ್ನು ಸ್ಮಿತ್ ಡ್ರೆಸ್ಸಿಂಗ್ ರೂಮ್‍ನತ್ತ ಸಹ ಆಟಗಾರರ ಕಡೆ ನೋಡಿ ಇದು ಔಟ್ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಹಾಯ ಕೇಳಿದರು. ಈ ಬಗ್ಗೆ ಕೊಹ್ಲಿ ತೀವ್ರವಾಗಿ ಖಂಡಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರು. ಈ ಬಗ್ಗೆ ಬಿಸಿಸಿಐ ಐಸಿಸಿಗೆ ದೂರು ಸಲ್ಲಿಸಿತ್ತು. ಆದರೆ, ಐಸಿಸಿ ಇದರ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಆದರೆ, ಆಸ್ಟ್ರೇಲಿಯಾ ಮಾಧ್ಯಮಗಳು ಇದನ್ನು ಅತಿರೇಕವಾಗಿ ಪ್ರಕಟಿಸಿದ್ದು, ವಿರಾಟ್ ಕೊಹ್ಲಿಯನ್ನು ಪ್ರಾಣಿಗಳ ಜತೆ ಹೋಲಿಕೆ ಮಾಡಿ ಹೊಸ ವಿವಾದ ಎಬ್ಬಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin