ಕೊಹ್ಲಿ ಆಯ್ತು.. ಈಗ ಪ್ರಧಾನಿಗೆ ತೇಜಸ್ವಿ ಸವಾಲ್, ಆದರೆ ಫಿಟ್ನೆಸ್ ಬಗ್ಗೆ ಅಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Modi

ಪಾಟ್ನಾ/ನವದೆಹಲಿ, ಮೇ 24-ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರ ನಾನು ಫಿಟ್ ಆದ್ರೆ ದೇಶ ಫಿಟ್…(#HumFitTohIndiaFit ) ಎಂಬ ಅಭಿಯಾನದ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸವಾಲು ಹಾಕಿದ್ದರು. ಅವರು ನೀಡಿದ್ದ ಚಾಲೆಂಜ್ ಸ್ವೀಕರಿಸಿದ ಕೊಹ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿ ಸವಾಲು ಹಾಕಿ ಸುದ್ದಿ ಮಾಡಿದ್ದರು.   ವಿರಾಟ್ ನೀಡಿದ್ದ ಸವಾಲನ್ನು ಈಗಾಗಲೇ ಒಪ್ಪಿಕೊಂಡಿರುವ ಮೋದಿ ಆದಷ್ಟು ಬೇಗ ನನ್ನ ಫಿಟ್ನೆಸ್ ಗುಟ್ಟು ವಿಡಿಯೋ ಮೂಲಕ ಬಹಿರಂಗಗೊಳಿಸುವುದಾಗಿ ತಿಳಿಸಿದ್ದರು. ಈಗ ಕೊಹ್ಲಿ ನಂತರ ಬಿಹಾರ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ತೇಜಸ್ವಿ ಯಾದವ ಈಗ ಮೋದಿಗೆ ಸವಾಲು ಹಾಕಿದ್ದಾರೆ. ಆದರೆ ಇದು ಫಿಟ್ನೆಸ್‍ಗೆ ಸಂಬಂಧಪಟ್ಟಿದ್ದಲ್ಲ.

While we have nothing against accepting fitness challenge from @imVkohli . I urge you to accept the challenge to provide jobs to young, relief to farmers, promise of no violence against dalits & minorities. Would you accept my challenge @narendramodi Sir?— Tejashwi Yadav (@yadavtejashwi) May 24, 2018.

ನೀವು ಕೊಹ್ಲಿ ಅವರ ಚಾಲೆಂಜ್ ಸ್ವೀಕಾರಿಸಿರುವುದು ನಮ್ಮ ವಿರೋಧ ಇಲ್ಲ. ಆದರೆ ಯುವಕರಿಗೆ ಉದ್ಯೋಗ ಒದಗಿಸುವ, ರೈತರಿಗೆ ಸಹಾಯ ಮಾಡುವ, ದಲಿತರ ಮೇಲೆ ನಡೆಯುತ್ತಿರುವ ಹಿಂಸಾಚಾರ ತಡೆಯುವ ಸವಾಲು ಒಪ್ಪಿಕೊಳ್ಳಿ ಎಂದು ತೇಜಸ್ವಿ ಟ್ವಿಟ್ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin