ಕೊಹ್ಲಿ ಮತ್ತು ಟೀಮ್ ಇಂಡಿಯಾ ಬಗ್ಗೆ ಅಪಹಾಸ್ಯ ಮಾಡಿದ ಪಾಕಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Pakistan

ನವದೆಹಲಿ. ಆ.27 : ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವನ್ನು ಹಿಂದಿಕ್ಕಿ ಪಾಕಿಸ್ತಾನ ನಂ.1 ಸ್ಥಾನಕ್ಕೇರಿದ ಹಿನ್ನೆಲೆಯಲ್ಲಿ  ಪಾಕಿಸ್ತಾನಿ ಅಭಿಮಾನಿಗಳು ತಮ್ಮ ಫೋಟೊಶಾಪ್ ಕೌಶಲ್ಯ ಬಳಸಿ ಭಾರತ ತಂಡ ಮತ್ತು ನಾಯಕ ವಿರಾಟ್ ಕೊಹ್ಲಿ ಅಪಹಾಸ್ಯ ಮಾಡುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ್ದಾರೆ.  ಕ್ವೀನ್ ಪಾರ್ಕ್ ಓವಲ್ ನ ಒದ್ದೆ ಮೈದಾನದಲ್ಲಿ ಭಾರತಕ್ಕೆ ಟಾಪ್ ಸ್ಥಾನ ರಕ್ಷಿಸಿಕೊಳ್ಳಲು ವಿಫಲವಾದ ಬಳಿಕ ಪಾಕಿಸ್ತಾನ ಮೊದಲ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು. ಭಾರತದ ಅಂತಿಮ ಟೆಸ್ಟ್ ಮಳೆಯಿಂದ ಡ್ರಾ ಆದ ಬಳಿಕ ಭಾರತ 110 ಪಾಯಿಂಟ್ ಗಳಿಸಿದ್ದರೆ ಪಾಕಿಸ್ತಾನ ಮೂರನೇ ಶ್ರೇಯಾಂಕದ ಆಸ್ಟ್ರೇಲಿಯಾಗಿಂತ 2 ಪಾಯಿಂಟ್ ಮುಂದಿತ್ತು.

ಭಾರತ ನಂಬರ್ ಒನ್ ಟೆಸ್ಟ್ ಶ್ರೇಯಾಂಕ ಗಳಿಸಲು ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಪಂದ್ಯ ಗೆಲ್ಲಬೇಕಿತ್ತು. ಉತ್ತಮ ಅಂತರದಿಂದ ಭಾರತ ಗೆಲ್ಲುವುದಕ್ಕೆ ವೈಫಲ್ಯದಿಂದ ಅವರು 2 ಪಾಯಿಂಟ್ ಕಳೆದುಕೊಂಡಿದ್ದು, ಪಾಕಿಸ್ತಾನ 2 ಪಾಯಿಂಟ್ ಗಳಿಸಿದೆ. ಈ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಅಭಿಮಾನಿಗಳು ಕೊಹ್ಲಿ ಮತ್ತು ಅವರ ಬಳಗವನ್ನು ಫೋಟೊಶಾಪಿಂಗ್ ಮೂಲಕ ಅಣಕಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin