ಕೊಹ್ಲಿ ಹುಡುಗರಿಗೆ ಆತ್ಮವಿಶ್ವಾಸ ತುಂಬಿದ ಸಚಿನ್

ಈ ಸುದ್ದಿಯನ್ನು ಶೇರ್ ಮಾಡಿ

Sachin--01

ಪುಣೆ, ಫೆ.26– ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋತಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಿದ್ದಾರೆ.  ಭಾರತ ಇತ್ತೀಚೆಗೆ ತೋರಿಸಿರುವ ಸಾಮಥ್ರ್ಯವು ಇಡೀ ಜಗತ್ತನ್ನೇ ನಿಬ್ಬೆರಗು ಗೊಳಿಸಿತ್ತು. ಈಗ ಆಸೀಸ್ ವಿರುದ್ಧ ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನು 333 ಭಾರೀ ಅಂತರದಿಂದ ಸೋತಿರುವುದು ನಾಯಕ ವಿರಾಟ್ ಕೊಹ್ಲಿಯ ಚಿತ್ತ ಚಂಚಲಗೊಳಿಸಿದೆ.  ಭಾರತ ತಂಡವು ಕೇವಲ ಒಂದು ಪಂದ್ಯವನ್ನು ಸೋತಿದೆಯೇ ಹೊರತು ಸರಣಿಯನ್ನಲ್ಲ . ಮುಂಬರುವ ಪಂದ್ಯಗಳಲ್ಲಿ ಕೊಹ್ಲಿ ಬಳಗವು ತಮ್ಮ ಆತ್ಮವಿಶ್ವಾಸದಿಂದ ಆಡುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಸೋಲಿಸದೆ ಎಂದು ತೆಂಡೂಲ್ಕರ್ ನುಡಿದರು.

ಗವಾಸ್ಕರ್ ಗರಂ:

ಪಂದ್ಯ ಕುರಿತು ಮತ್ತೊಬ್ಬ ದಿಗ್ಗಜ ಗವಾಸ್ಕರ್ ಪ್ರತಿಕ್ರಿಯಿಸಿದ್ದು ಭಾರತ ತಂಡವು ಟೀ ವಿರಾಮಕ್ಕೂ ಮುನ್ನವೇ ತನ್ನೆಲ್ಲಾ ವಿಕೆಟ್ ಒಪ್ಪಿಸಿ ಸೋಲಿಗೆ ಶರಣಾಗಿರುವುದನ್ನು ನೋಡಿದರೆ ಆಟಗಾರರಿಗೆ ವಿಶ್ರಾಂತಿ ಅಗತ್ಯವಿತ್ತು ಎಂಬುದನ್ನು ತೋರಿಸುತ್ತದೆ ಎಂದರು.  ಅಲ್ಲದೆ ಬ್ಯಾಟ್ಸ್‍ಮನ್‍ಗಳು ವಿಕೆಟ್ ಮುಂದೆ ದೃಢವಾಗಿ ನಿಲ್ಲುವ ಸಾಮಥ್ರ್ಯವನ್ನು ರೂಢಿಸಿಕೊಳ್ಳಬೇಕೆಂದು ಗವಾಸ್ಕರ್ ತಿಳಿಸಿದ್ದಾರೆ.  ಭಾರತ ತಂಡವು ಎರಡು ಇನ್ನಿಂಗ್ಸ್‍ನಿಂದಲೂ 75 ಓವರ್‍ಗಳನ್ನು ಪೂರೈಸುವ ಹೊತ್ತಿಗೆ 20 ವಿಕೆಟ್‍ಗಳನ್ನು ಕಳೆದುಕೊಂಡಿರುವುದನ್ನು ನೋಡಿದರೆ ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ಹಿಡಿದ ಕೈಗನ್ನಡಿಯಂತಿತ್ತು ಎಂದು ಅವರು ನುಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin