ಕೋಟಕ್ ಮಹೀಂದ್ರಾ ಬ್ಯಾಂಕ್ ಮೇಲೆ ಐಟಿ ದಾಳಿ : 32 ಕೋಟಿ ರೂ. ಬ್ಲಾಕ್ ಮನಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

KOtak-Mahidra

ನವದೆಹಲಿ, ಡಿ.24-ಕಾಳಧನದ ವಿರುದ್ಧ ದೇಶಾದ್ಯಂತ ಸಮರ ಮುಂದುವರಿಸಿರುವ ಅದಾಯ ತೆರಿಗೆ ಮತ್ತು ಇಡಿ ಅಧಿಕಾರಿಗಳು ದೆಹಲಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ಖಾಸಗಿ ರಾಜಧಾನಿ ದೆಹಲಿಯ ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯೊಂದರ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 6 ನಕಲಿ ಖಾತೆಗಳಲ್ಲಿದ್ದ 32 ಕೋಟಿ ರೂ. ಹಣವನ್ನು ಬಯಲಿಗೆಳೆದಿದ್ದಾರೆ.   ದೆಹಲಿಯ ನೊಯ್ದಾದ ಅಕ್ಸಿಸ್ ಬ್ಯಾಂಕ್ ಶಾಖೆ ಮೇಲೆ ದಾಳಿ ಮಾಡಿ 20 ನಕಲಿ ಖಾತೆಗಳಲ್ಲಿದ್ದ 60 ಕೋಟಿ ಅಕ್ರಮ ಠೇವಣಿಯನ್ನು ಐಟಿ ಮತ್ತು ಇಡಿ ಪತ್ತೆ ಮಾಡಿತ್ತು.

ಕೋಟಕ್ ಮಹೀಂದ್ರಾ ಬ್ಯಾಂಕ್‍ನ ನಕಲಿ ಖಾತೆಗಳಲ್ಲಿ ಪತ್ತೆಯಾದ 32 ಕೋಟಿ ರೂ.ಗಳಿಗೆ ಸಂಬಂಧಪಟ್ಟಂತೆ ಉನ್ನತಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ದೆಹಲಿಯ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆಯಲ್ಲಿರುವ 150 ಕೋಟಿ ರೂ.ಗಳ ಶಂಕಾಸ್ಪದ ನಗದು ಠೇವಣಿ ಬಗ್ಗೆ ಜÁರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಆಕ್ಸಿಸ್ ಬ್ಯಾಂಕ್‍ನಲ್ಲೂ ಬಾರಿ ಅಕ್ರಮ ಪತ್ತೆಯಾಗಿತ್ತು .ರಾಜಸ್ತಾನದ ಜೈಪುರದಲ್ಲಿ ಇಬ್ಬರು ಉದ್ಯಮಿಗಳನ್ನು ಬಂಧಿಸಿ 35 ಲಕ್ಷ ರೂ. ಹೊಸ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ನಿನ್ನೆ ದೆಹಲಿಯ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆಯಲ್ಲಿರುವ 150 ಕೋಟಿ ರೂ.ಗಳ ಶಂಕಾಸ್ಪರ ನಗದು ಠೇವಣಿ ಬಗ್ಗೆ ಜÁರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದರು.
ಕರೋಲ್‍ಬಾಗ್‍ನ ಹೋಟೆಲ್ ಒಂದರ ಮೇಲೆ ಇತ್ತೀಚೆಗೆ ತಡ ರಾತ್ರಿ ದಾಳಿ ನಡೆಸಿ ದಾಖಲೆಗಳಿಲ್ಲದ 3.25 ಕೋಟಿ ರೂ.ಗಳನ್ನು ವಶಪಡಿಸಿಕೊಂಡು, ಐವರನ್ನು ಬಂಧಿಸಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin