‘ಕೋಟಿಗೊಬ್ಬ’ನ ಅಬ್ಬರ

ಈ ಸುದ್ದಿಯನ್ನು ಶೇರ್ ಮಾಡಿ

Kotigobba

ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಬಹು ನಿರೀಕ್ಷೆಯಿರುವ ಅದ್ಧೂರಿ ವೆಚ್ಚದ ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಸಿದ್ಧವಾಗಿದೆ. ಕಿಚ್ಚ ಸುದೀಪ್ ಹಾಗೂ ಕೆ.ಎಸ್. ರವಿಕುಮಾರ್ ಅವರ ಸಂಗಮದಲ್ಲಿ ಮೂಡಿ ಬಂದಿರುವ ಚಿತ್ರ ಕೋಟಿಗೊಬ್ಬ-2 ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಶುರುವಾದಾಗಿನಿಂದಲೂ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿರಲಿಲ್ಲ. ಸಿನಿಮಾ ರಿಲೀಸಾಗುವ ಹಂತದಲ್ಲಿರುವಾಗ ನಿರ್ಮಾಪಕರ ಹೊರತಾಗಿ ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು.  ಬಿಡುಗಡೆಪೂರ್ವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಮೊದಲು ಬಂದ ಪ್ರಶ್ನೆಯೇ ಇದಾಗಿತ್ತು.   ಇದಕ್ಕೆ ಉತ್ತರಿಸಿದ ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರು ಈ ಚಿತ್ರ ರೀಮೇಕ್ ಅಲ್ಲ. ಶಿವಕುಮಾರ್ ಅವರು ಬರೆದ ಕತೆಯನ್ನು ಕಮರ್ಷಿಯಲ್ ಆಗಿ ತೋರಿಸಲಾಗಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಎರಡೆರಡು ಬಾರಿ ಚಿತ್ರೀಕರಣ ನಡೆಸಿದ ಕಾರಣ ಚಿತ್ರದ ರಿಲೀಸ್ ತಡವಾಗಿದೆ.

ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಅಲ್ಲದೆ ಕ್ಲೈಮಾಕ್ಸ್  ದೃಶ್ಯಗಳನ್ನು ಊಟಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕಥೆಯಲ್ಲಿ ನಾಯಕಿಗೂ ಪ್ರಾಮುಖ್ಯತೆ ಇದೆ. ಅಲ್ಲದೆ ಒಂದು ಹಾಡಿನಲ್ಲಿ ಸುದೀಪ್ ಅವರ ಜೊತೆ ಚಿಕ್ಕದಾಗಿ ಹೆಜ್ಜೆ ಹಾಕಿದ್ದೇನೆ ಎಂದು ಚಿತ್ರದ ಬಗ್ಗೆ ಮಾತನಾಡುತ್ತಾ  ಹೇಳಿದರು. ಅಲ್ಲದೆ ನಟ ರಜನಿಕಾಂತ್ ಅವರ ಜೊತೆ ಬೆಂಗಳೂರಿನಲ್ಲಿ ಸುತ್ತಾಡಿದ್ದನ್ನು ಕೂಡ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.  ಚಿತ್ರದಲ್ಲಿ ಕಿಚ್ಚಸುದೀಪ್ ಅವರೊಂದಿಗೆ ಹೆಜ್ಜೆಹಾಕಿ ಕುಣಿದಾಡಿದ ನಾಯಕಿ ನಿತ್ಯಾಮೆನನ್ ಅವರು ಮಾತನಾಡಿ  ನಾನು ನಟಿಸಿದ ಮೊದಲ ಕಮರ್ಷಿಯಲ್ ಸಿನಿಮಾ ಇದು ಅನ್ನಬಹುದು. ಒಂದು ಚಿಕ್ಕ ಪಟ್ಟಣದಿಂದ ಬಂದ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸುದೀಪ್ ಅವರ ನಟನೆಯಲ್ಲಿ ನಿರ್ದೇಶನ ಮಾಡುವ ಆಸೆ ಇದೆ. ಅವರನ್ನು ನೋಡುತ್ತಾ ಇದ್ದರೆ ಸಾಕಷ್ಟು ಆಲೋಚನೆಗಳು ಬರುತ್ತವೆ. ಸಾಂಪ್ರದಾಯಿಕವಲ್ಲದ ಚಿತ್ರವಾದರೂ ನೋಡಲು ಸುಂದರವಾಗಿದೆ ಎಂದು  ಹೇಳಿದರು.

ಅಂದಿನ ಕೇಂದ್ರಬಿಂದು ನಾಯಕ ನಟ ಕಿಚ್ಚ ಸುದೀಪ್ ಮಾತನಾಡಿ ದಕ್ಷಿಣ ಭಾರತದಲ್ಲಿ  ಎಲ್ಲರಿಗೂ ಗೊತ್ತಿರುವ ಡೈರೆಕ್ಟರ್ ಜೊತೆ ಕೆಲಸ ಮಾಡಿದ್ದು ವಿಶೇಷ ಅನುಭವ.  ಈ ಶೀರ್ಷಿಕೆಯನ್ನು ನಿರ್ಮಾಪಕ ಸೂರಪ್ಪ ಬಾಬು ಅವರೇ ಆಯ್ಕೆಮಾಡಿದ್ದು. ಹಿಂದೆ ಕೋಟಿಗೊಬ್ಬ  ಚಿತ್ರವನ್ನು ಅವರೇ  ನಿರ್ಮಾಣ ಮಾಡಿದ್ದರು. ಹಿಂದೆ ವಿಷ್ಣುವರ್ಧನ ಟೈಟಲ್ ಇಟ್ಟುಕೊಂಡಿದ್ದಕ್ಕೆ ಇವತ್ತಿಗೂ ಆರೋಪ ಇದೆ. ಅದಕ್ಕಾಗಿ ಬೇರೆ ಹೆಸರನ್ನು ಇಡಲು ಕೇಳಿಕೊಂಡಿದ್ದಾರೆ. ಆದರೆ ನಿರ್ಮಾಪಕ ಬಾಬು ಅವರು ಒಪ್ಪದೆ, ಸದ್ಯ ಶೂಟಿಂಗ್ ಶುರು ಮಾಡೊಣ ಎಂದು ಹೇಳಿದ್ದರು. ಎರಡು ಪಾತ್ರಗಳಲ್ಲಿ ಅಭಿನಯ ಮಾಡಿರುವುದರಿಂದ ಮತ್ತು ಸನ್ನಿವೇಶಗಳು ಕತೆಗೆ ಈ ಹೆಸರು ಸೂಕ್ತವಾಗುತ್ತೆ ಅನಿಸಿತು. ನನಗೆ ಕೋಟಿಗೊಬ್ಬ ಎಂದರೆ ವಿಷ್ಣು ಸರ್ ಮಾತ್ರ ಎಂದು ಹೇಳುತ್ತ  ಪಾತ್ರದ ಬಗ್ಗೆ ಹೇಳಿದರು.  ಗಂಡು-ಮಹಾಗಂಡು, ಶೂರ-ಮಹಾಶೂರ, ಸುದೀಪ್-ಸುದೀಪ್ ಅಂತ ಹೇಳಬಹುದು. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಪ್ರಪಂಚದಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡು ಗಡೆ ಯಾಗುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಚೆನ್ನೈನಲ್ಲಿ ಡಬ್ಬಿಂಗ್ ಸಿನಿಮಾ ಎಂದುಕೊಂಡಿದ್ದರು. ಅದನ್ನು ಮನವರಿಕೆ ಮಾಡಿಕೊಡಲು ಆಡಿಯೊ ಬಿಡುಗಡೆ ಕಾರ್ಯಕ್ರಮ ವನ್ನು ಅಲ್ಲಿ ಹಮ್ಮಿಕೊಂಡಿ ದ್ದಾಗಿ ಕೂಡ ಹೇಳಿದರು. ನಿರ್ಮಾಪಕ ಸೂರಪ್ಪ ಬಾಬು ಚಿತ್ರದ ರಿಲೀಸ್‍ಗಾಗಿ ಚೆನ್ನೈನಲ್ಲಿಯೆ ಬೀಡು ಬಿಟ್ಟಿದ್ದಾರೆ ಎಂದು  ಕೂಡ ಅವರು ಹೇಳಿಕೊಂಡರು.

► Follow us on –  Facebook / Twitter  / Google+

 

Facebook Comments

Sri Raghav

Admin