ಕೋಟೆ ನಾಡು ಚಿತ್ರದುರ್ಗದಲ್ಲಿ ಅಬ್ಬರಿಸಿದ ‘ನಮೋ’

ಈ ಸುದ್ದಿಯನ್ನು ಶೇರ್ ಮಾಡಿ

Modi-Chitradurga--01

ಚಿತ್ರದುರ್ಗ, ಮೇ 6- ಅಂಬೇಡ್ಕರ್ ಅವರನ್ನು ಅಪಮಾನಿಸಿದ ಕಾಂಗ್ರೆಸ್ ದೀನದಲಿತರ ಬಗ್ಗೆ ಕಾಳಜಿ ವಹಿಸದೆ ಕೇವಲ ಮತಬ್ಯಾಂಕ್‍ಗಾಗಿ ಬಳಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಇಂದಿಲ್ಲಿ ಗುಡುಗಿದ್ದಾರೆ. ಚಿತ್ರದುರ್ಗದಲ್ಲಿಂದು ಬಿಜೆಪಿ ಬೃಹತ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವ ಮಹನೀಯರ ಜಯಂತಿಯನ್ನು ಆಚರಿಸಬೇಕೆಂಬುದನ್ನೇ ತಿಳಿಯದೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡಿದೆ. ಚಿತ್ರದುರ್ಗದ ಈ ಪವಿತ್ರ ಸ್ಥಳದಲ್ಲಿ ನಾಡಿಗಾಗಿ ಹೋರಾಡಿ ವೀರಮರಣ ಅಪ್ಪಿದ ಓಬವ್ವನನ್ನು ಕೊಂದ ಮತ್ತು ಇಲ್ಲಿನ ರಾಜರಿಗೆ ವಿಷ ಹಾಕಿದವನ ಜಯಂತಿಯನ್ನು ಆಚರಿಸಿ ನಿಮ್ಮೆಲ್ಲರನ್ನೂ ಅಪಮಾನಿಸಿದೆ ಎಂದು ಟಿಪ್ಪು ಹೆಸರೇಳದೆ ಕಿಡಿಕಾರಿದರು.

ಸ್ವಾತಂತ್ರ ಬಂದ ನಂತರ ಅಧಿಕಾರ ನಡೆಸಿದ್ದ ಕಾಂಗ್ರೆಸಿಗರು ತಮ್ಮ ಪರಿವಾರದವರಿಗೆ ಭಾರತ ರತ್ನ ನೀಡಿದರು. ಆದರೆ, ನಮ್ಮ ದೇಶದ ಮಹನೀಯ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಮರೆತಿದ್ದರು. ಅವರು ಬದುಕಿದ್ದಾಗ ಅವರಿಗೆ ನಾನಾ ರೀತಿಯಲ್ಲಿ ಹಿಂಸೆ ನೀಡಿ ಚುನಾವಣೆಯಲ್ಲೂ ಕೂಡ ಸೋಲಿಸಿದವರು ಕಾಂಗ್ರೆಸಿಗರು. ಈಗ ಕೇವಲ ಮತಕ್ಕಾಗಿ ಅವರ ಹೆಸರನ್ನು ಹೇಳಿಕೊಳ್ಳುತ್ತಿದ್ದಾರೆ. ಹಳ್ಳಿಗಾಡಿನ, ಆದಿವಾಸಿ ಜನರ ಹೇಗಿದ್ದಾರೆ. ದಲಿತರ ಪಾಡು ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಇಡೀ ವಿಶ್ವದಲ್ಲೇ ಅವರ ಕೀರ್ತಿಪತಾಕೆ ಹಾರಿಸಿದ್ದೇವೆ. ದಲಿತರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಶ್ರಮವಹಿಸಿದೆ. ಶಾಸನವನ್ನೂ ಕೂಡ ತರಲು ಹೊರಟಿದೆ. ಆದರೆ, ಇದೇ ಕಾಂಗ್ರೆಸಿಗರು ಅದನ್ನು ಸಂಸತ್ತಿನಲ್ಲಿ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಎಂಬ ಮಂತ್ರದೊಂದಿಗೆ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸಿಗರು ನಮ್ಮ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

Facebook Comments

Sri Raghav

Admin