ಕೋಟ್ಪಾ ಉಲ್ಲಂಘನೆ :1664 ಪ್ರಕರಣ- 3.19ಲಕ್ಷ ದಂಡ ವಸೂಲಿ

ಈ ಸುದ್ದಿಯನ್ನು ಶೇರ್ ಮಾಡಿ

Eesanje.....

ತುಮಕೂರು,ಸೆ.2- ತಂಬಾಕು ನಿಯಂತ್ರಣ ಕಾಯ್ದೆ-2003 ರನ್ವಯ 2016 ಜೂನ್‍ನಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದ 1664 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 319362 ರೂ.ಗಳನ್ನು ದಂಡ ವಸೂಲಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಸಿ.ಅನಿತಾ ತಿಳಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಕಾಯ್ದೆ-2003ರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಜೂನ್ ಮಾಹೆಯಲ್ಲಿ ನಡೆಸಿದ ದಾಳಿಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು 310 ಪ್ರಕರಣಗಳನ್ನು ದಾಖಲಿಸಿ ರೂ.79740 ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಶಿರಾ ತಾಲ್ಲೂಕಿನಲ್ಲಿ ಮೊದಲ ದಿನವೇ 103 ಪ್ರಕರಣಗಳನ್ನು ದಾಖಲಿಸಿ ರೂ.15740 ದಂಡವನ್ನು ವಸೂಲಿ ಮಾಡಲಾಗಿದೆ. ಉಳಿದಂತೆ ತಿಪಟೂರು ತಾಲ್ಲೂಕು 182 ಪ್ರಕರಣದಿಂದ ರೂ. 34930, ಪಾವಗಡ ತಾಲ್ಲೂಕು 179 ಪ್ರಕರಣ ರೂ.34880, ಕೊರಟಗೆರೆ ತಾಲ್ಲೂಕು 154 ಪ್ರಕರಣದಿಂದ ರೂ.23020, ಮಧುಗಿರಿ ತಾಲ್ಲೂಕು 137 ಪ್ರಕರಣದಿಂದ ರೂ. 23040, ಚಿ.ನಾ.ಹಳ್ಳಿ ತಾಲ್ಲೂಕು 150 ಪ್ರಕರಣಗಳಿಂದ ರೂ. 27290, ತುರುವೇಕೆರೆ ತಾಲ್ಲೂಕು 152 ಪ್ರಕರಣದಿಂದ ರೂ.31890, ಕುಣಿಗಲ್ ತಾಲ್ಲೂಕು 145 ಪ್ರಕರಣದಿಂದ ರೂ.25400 ಮತ್ತು ಗುಬ್ಬಿ ತಾಲ್ಲೂಕಿನಲ್ಲಿ 152 ಪ್ರಕರಣಗಳ ದಾಖಲಿಸಿ 21760 ರೂ. ಗಳ ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ: ವೀರಭದ್ರಯ್ಯ, ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‍ನ ಡಾ.ಚಂದ್ರಶೇಖರ್, ಪ್ರವೀಣ್, ತಂಬಾಕು ನಿಯಂತ್ರಣ ಘಟಕದ ರವಿಪ್ರಕಾಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin