ಕೋಮು ಸೌಹಾರ್ಧತೆಗೆ ಧಕ್ಕೆ : ಸುನೀಲ ಮಾನ್ವಿ ಗಡಿಪಾರಿಗೆ ಒತ್ತಾಯಿಸಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

7

ಗದಗ,ಡಿ23- ಮುಸ್ಲಿಂ ಸಮುದಾಯದ ಪವಿತ್ರ ಯಾತ್ರಾ ಸ್ಥಳವಾದ ಮಕ್ಕಾಮದೀನಾದಲ್ಲಿರುವ ಕಾಬಾದ ಭಾವಚಿತ್ರದ ಮೇಲೆ ಶಿವನ ಮೂರ್ತಿಯ ಭಾವಚಿತ್ರ ಇಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ಧತೆಗೆ ಧಕ್ಕೆ ತಂದಿರುವ ಸುನೀಲ ಮಾನ್ವಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಗದಗ-ಬೆಟಗೇರಿ ಮುಸ್ಲಿಂ ನೌಜವಾನ್ ಕಮಿಟಿ ಪದಾಕಾರಿಗಳು, ಮುಖಂಡರು ನಿನ್ನೆ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಮುಸ್ಲಿಂ ಜಾಗೃತ ವೇದಿಕೆಯ ರಾಜ್ಯ ಖಜಾಂಚಿ ಶಿರಾಜ ಅಹ್ಮದ ಖಾಜಿ ಮಾತನಾಡಿ, ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆ ಕೋಮು ಸೌಹಾರ್ಧತೆಗೆ ದೇಶದಲ್ಲಿಯೇ ಹೆಸರಾಗಿದ್ದು, ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯ ಬಾಂಧವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಇಂತಹ ಪವಿತ್ರ ಬಾಂಧವ್ಯಕ್ಕೆ ಧಕ್ಕೆ ಬರುವಂತೆ ವರ್ತಿಸಿರುವ ಯುವಕನನ್ನು ಈಗಾಗಲೇ ಪೊಲೀಸರು ಬಂಸಿದ್ದು, ಅವನನ್ನು ಕೂಡಲೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಕಾರಿಗಳು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದರು.

ಕರ್ನಾಟಕ ರಾಜ್ಯ ಮುಸ್ಲಿಂ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ನಿಸಾರ ಅಹ್ಮದ ಖಾಜಿ ಮಾತನಾಡಿ, ರಾಷ್ಟ್ರೀಯ ಕೋಮು ಸೌಹಾರ್ಧ ಪ್ರಶಸ್ತಿ ಪಡೆದ ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ನಾಡಿನಲ್ಲಿ ಕೆಲ ಕಿಡಿಗೇಡಿಗಳು ಇತ್ತೀಚೆಗೆ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.ಜುಮ್ಮಾಮಸೀದೆ, ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನಗಳನ್ನೊಳಗೊಂಡು ಒಂದೇ ಟ್ರಸ್ಟ್ ರಚಿಸಿ ದೇಶಕ್ಕೆ ಮಾದರಿಯಗಿರುವ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರ ನಡುವೆ ಕೆಲ ದುಷ್ಟ ಶಕ್ತಿಗಳು ವಿಷಬೀಜ ಬಿತ್ತುತ್ತಿವೆ. ಹಿಂದೂ-ಮುಸ್ಲಿಂ ಜನಾಂಗದವರ ಮಧ್ಯೆ ಕೋಮು-ಗಲಭೆಗೆ ಕಾರಣರಾಗುತ್ತಿದ್ದಾರೆ. ತಪ್ಪಿತಸ್ಥ ಯುವಕನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಕೋಮುವಾದಿ ಸುನೀಲ ಮಾನ್ವಿ ಎಂಬುವವನನ್ನು ಐದು ವರ್ಷಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆ ಕಾಪಾಡಿಕೊಳ್ಳಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗದಗ-ಬೆಟಗೇರಿ ಮುಸ್ಲಿಂ ನೌಜವಾನ ಕಮಿಟಿ ಅಧ್ಯಕ್ಷ ಮಹ್ಮದ ಆರೀಫ್ ಬಡ್ನಿ ಮಾತನಾಡಿ, ಜಿಲ್ಲೆಯ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಈ ಕುರಿತು ಕ್ರಮ ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಸೌಹಾರ್ಧ ಹಾಳಾಗುವ ಸಂದರ್ಭ ಎದುರಾಗುವ ಆತಂಕವಿದೆ. ಈ ಕುರಿತು ಈಗಾಗಲೇ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಮು ಸೌಹಾರ್ಧತೆಗೆ ಧಕ್ಕೆ ತಂದಿರುವ ಕೋಮುವಾದಿ ಯುವಕ ಸುನೀಲ ಮಾನ್ವಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಅವರು ಜಿಲ್ಲಾಕಾರಿಗಳಲ್ಲಿ ಮನವಿ ಮಾಡಿದರು.ಮನವಿ ಸ್ವೀಕರಿಸಿದ ಅಪರ ಜಿಲ್ಲಾಕಾರಿ ಇಸ್ಲಾವುದ್ಧೀನ ಗದ್ಯಾಳ ಮಾತನಾಡಿ, ನಗರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಚಿತ್ರಗಳನ್ನು ಹರಿಬಿಟ್ಟ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು. ಗದಗ-ಬೆಟಗೇರಿ ಮುಸ್ಲಿಂ ನೌಜವಾನ್ ಕಮಿಟಿ ಯುವ ಸದಸ್ಯ ಎಂ.ಆರ್. ಅಣ್ಣಿಗೇರಿ, ಕಲೀಲ ಮುಳಗುಂದ, ಶಾಹೀದ ಗಬ್ಬೂರ ಮತ್ತಿತರರು ಉಪಸ್ಥಿತರಿದ್ದರು.

 

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin