ಕೋರ್ಟ್ ಕಲಾಪಕ್ಕೆ ಹಾಜರಾದ ನಾಲ್ವರು ಹಿರಿಯ ನ್ಯಾಯಾಮೂರ್ತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Supreme-Court--02
ನವದೆಹಲಿ, ಜ.15-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿ ಸುದ್ದಿಯಾಗಿದ್ದ ನಾಲ್ವರು ಹಿರಿಯ ನ್ಯಾಯಾಧೀಶರು ಇಂದು ಕೋರ್ಟ್‍ಗೆ ಹಾಜರಾಗಿ ಎಂದಿನ ಕಲಾಪಗಳಲ್ಲಿ ಪಾಲ್ಗೊಂಡರು. ನ್ಯಾಯಮೂರ್ತಿಗಳಾದ ಜೆ.ಚಮಲೇಶ್ವರ್, ರಂಜನ್ ಗೊಗೈ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಜನವರಿ 12ರಂದು ಸುದ್ದಿಗೋಷ್ಠಿ ನಡೆಸಿ ಸಿಐಜೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಮೊದಲ ಕರ್ತವ್ಯದ ದಿನಕ್ಕೆ ಹಾಜರಾಗಿ ಎಂದಿನ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದರು.

ನಿನ್ನೆ ಇಡೀ ದಿನ ರಾಜಧಾನಿ ದೆಹಲಿಯಲ್ಲಿ ಸುಪ್ರೀಂಕೋರ್ಟ್ ಬಿಕ್ಕಟ್ಟು ಕುರಿತು ನ್ಯಾಯಾಂಗ ವಲಯದಲ್ಲಿ ಮಾತುಕತೆಗಳು ನಡೆದವು. ಭಾರತ ವಕೀಲರ ಪರಿಷತ್ತು(ಬಾರ್ ಕೌನ್ಸಿಲ್ ಆಫ್ ಇಂಡಿಯಾ-ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ನೇತೃತ್ವದ ಏಳು ಸದಸ್ಯರ ನಿಯೋಗವು ದೆಹಲಿಯಲ್ಲಿರುವ ಹಿರಿಯ ನ್ಯಾಯಾಧೀಶ ನ್ಯಾ. ಚಮಲೇಶ್ವರ್ ನಿವಾಸಕ್ಕೆ ತೆರಳಿ ಸೌಹಾರ್ದಯುತ ಸಂಧಾನ ಮಾತುಕತೆ ನಡೆಸಿತ್ತು. ಇದಕ್ಕೂ ಮುನ್ನ ಬಾರ್ ಕೌನ್ಸಿಲ್ ನಿಯೋಗವು ಸುಪ್ರೀಂಕೋರ್ಟ್‍ನ ಇತರ ನ್ಯಾಯಾಧೀಶರನ್ನು ಭೇಟಿ ಮಾಡಿ ಬಿಕ್ಕಟ್ಟು ಇತ್ಯರ್ಥ ಕುರಿತು ಗಹನವಾದ ಚರ್ಚೆ ನಡೆಸಿತು.  ಅಲ್ಲದೇ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೂ ಬಿಸಿಐ ನಿಯೋಗದ ಸದಸ್ಯರು ಮತ್ತು ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.

Facebook Comments

Sri Raghav

Admin