ಕೋಲಾರ ಚಿನ್ನದಗಣಿ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

KOlar-01

ನವದೆಹಲಿ/ಬೆಂಗಳೂರು/ಕೋಲಾರ, ಜ.27– ಕಳೆದ 15 ವರ್ಷಗಳಿಂದ ನಿಷ್ಕ್ರಿಯವಾಗಿರುವ ಪ್ರಾಚೀನ ಕೋಲಾರ ಚಿನ್ನದ ಗಣಿಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಆ ಮೂಲಕ 2.1 ಶತಕೋಟಿ ಡಾಲರ್ (143 ಶತಕೋಟಿ, 146 ದಶಲಕ್ಷ ರೂ.ಗಳ) ಮೊತ್ತದ ಚಿನ್ನದ ಅದಿರನ್ನು ಹೊರತೆಗೆಯಲು ಪರಿಶೀಲನೆ ನಡೆಸುತ್ತಿದೆ. ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಗಣಿಯಲ್ಲಿ ಉಳಿದಿರುವ ಚಿನ್ನದ ನಿಕ್ಷೇಪವನ್ನು ಹೊರತೆಗೆಯಲು ಸಾಧ್ಯವಾಗಬಹುದಾದ ಎಲ್ಲ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಒಡೆತನದ ಖನಿಜ ಅನ್ವೇಷಣ ನಿಗಮ ನಿಯಮಿತ (ಮಿನರಲ್ ಎಕ್ಸ್‍ಪ್ಲೊ ರೇಷನ್ ಕಾರ್ಪೊರೇಷನ್  ಲಿಮಿಟೆಡ್) ಗಂಭೀರ ಚಿಂತನೆ ನಡೆಸಿದೆ.

143 ಶತಕೋಟಿ, 146 ದಶಲಕ್ಷ ರೂ. ಮೌಲ್ಯದ ಚಿನ್ನವು ಕೋಲಾರ ಚಿನ್ನದ ಗಣಿಯ ಮಣ್ಣಿನಲ್ಲಿದ್ದು, ಅದನ್ನು ತೆಗೆಯಲು ಹಾಗೂ ಆ ಮೂಲಕ ನಿಷ್ಕ್ರಿಯ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‍ಅನ್ನು ಪುನಶ್ಚೇತನಗೊಳಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರವು ಸಂಬಂಧಪಟ್ಟ ಇಲಾಖೆಗಳೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದು, ಆದಷ್ಟು ಶೀಘ್ರ ಈ ಪ್ರಸ್ತಾವನೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ. ಚಿನ್ನ ಆಮದು ವಹಿವಾಟಿನಲ್ಲಿ ಚೀನಾ ನಂತರ ಎರಡನೆ ಸ್ಥಾನದಲ್ಲಿರುವ ಭಾರತವು ಪ್ರತಿ ವರ್ಷ 30 ಶತಕೋಟಿ ಡಾಲರ್ ಮೌಲ್ಯದ 900 ರಿಂದ 1000 ಟನ್‍ಗಳಷ್ಟು ಚಿನ್ನವನ್ನು ಹೊರದೇಶಗಳಿಂದ ತರಿಸಿಕೊಳ್ಳುತ್ತಿದೆ.

ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ದೇಶೀಯವಾಗಿಯೇ ಲಭ್ಯವಿರುವ ನಿಷ್ಕ್ರಿಯ ಚಿನ್ನದ ಗಣಿಯನ್ನು ಪುನಶ್ಚೇತನಗೊಳಿಸಿ ಆ ಮೂಲಕ ಬಂಗಾರದ ಅದಿರನ್ನು ಹೊರತೆಗೆಯಲು ಸಾಧ್ಯವಾಗಬಹುದಾದ ಎಲ್ಲ ಮಾರ್ಗೋಪಾಯಗಳನ್ನು ಗಂಭೀರವಾಗಿ ಪರಿಗಣಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin