ಕೋಲ್ಕತ್ತಾ ವಿಮಾ ಸಂಸ್ಥೆ ಕಟ್ಟಡಕ್ಕೆ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

kolkatta

ಪಶ್ಚಿಮಬಂಗಾಳ, ಅ.19-ಕೋಲ್ಕತ್ತಾದ ಜೀವವಿಮಾ ನಿಗಮದ ಕಟ್ಟಡದಲ್ಲಿ ಅಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು , ಅದನ್ನು  ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು. 19 ಅಂತಸ್ತಿನ ಕಟ್ಟಡದ 17ನೇ ಅಂತಸ್ತಿನಲ್ಲಿರುವ ಜೀವಸುಧಾ ಕಟ್ಟಡದಲ್ಲಿ  ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹತ್ತಕ್ಕೂ ಹೆಚ್ಚು ವಾಹನಗಳನ್ನು ಬಳಸಿ ಬೆಂಕಿಯನ್ನು ನಂದಿಸಿದರು.

ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಕೆಲವು ದಾಖಲೆ, ಪುಸ್ತಕಗಳು ಬೆಂಕಿಗೆ ಆಹುತಿಯಾಗಿವೆ ಎಂದು ಎಸ್‍ಬಿಐನ ಕೋಲ್ಕತ್ತಾ ವಿಭಾಗದ ಅಧಿಕಾರಿ ಪಿ.ಪಿ.ಸೇನ್ ಗುಪ್ತ ತಿಳಿಸಿದ್ದರೆ. ಎಲ್‍ಐಸಿ ಕಟ್ಟಡದ ಸರ್ವರ್ ರೂಮ್‍ನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕಟ್ಟಡ ಧಗಧಗ ಹೊತ್ತಿ ಉರಿಯಿತು.

Facebook Comments

Sri Raghav

Admin