ಕೋಳಿವಾಡ ತರಾಟೆಗೆ ಅಧಿಕಾರಿಗಳು ತಬ್ಬಿಬ್ಬು

ಈ ಸುದ್ದಿಯನ್ನು ಶೇರ್ ಮಾಡಿ

Koliwad

ಬೆಂಗಳೂರು, ಆ.11- ಕೆರೆ ಒತ್ತುವರಿ ತೆರವು ಸದನ ಸಮಿತಿ ಸಭೆಗೆ ಭಾಗಿಯಾಗದ ಹಲವು ರೆವಿನ್ಯೂ ಅಧಿಕಾರಿಗಳನ್ನು ಸಮಿತಿ ಅಧ್ಯಕ್ಷರೂ ಆದ ಸ್ಪೀಕರ್ ಕೋಳಿವಾಡ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.  ಕೆರೆಗಳಿಗೆ ಹೊಂದಿಕೊಂಡಿರುವ ಬಫರ್‍ಜೋನ್ ಪ್ರದೇಶ ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ರೆವಿನ್ಯೂ ಅಧಿಕಾರಿಗಳು ಮಾಹಿತಿ ಕೊಡಬೇಕು. ಆದರೆ ಅವರು ಸಭೆಗೆ ಬಂದಿಲ್ಲ. ಬಿಬಿಎಂಪಿ ಹಾಗೂ ರೆವಿನ್ಯೂ ಅಧಿಕಾರಿಗಳು ತಕ್ಷಣವೇ ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕೆಂದು ರೇಗಿದರು.  ಕೆರೆ ಒತ್ತುವರಿ ತೆರವು ವಿಚಾರದಲ್ಲಿ ತಡೆಯಾಜ್ಞೆ ಪಡೆದ ಪ್ರಕರಣಗಳಲ್ಲಿ ತೆರವು ಮಾಡಲು ಅಫೀಲು ಅರ್ಜಿ ಸಲ್ಲಿಸಿದ್ದೀರಾ, ಬಿಬಿಎಂಪಿ, ಬಿಡಿಎ ಮತ್ತು ಜಿಲ್ಲಾಧಿಕಾರಿಗಳನ್ನು ಪ್ರತಿವಾದಿ ಮಾಡಿರುವ ಪ್ರಕರಣಗಳಲ್ಲಿ ಕಾನೂನು ಹೋರಾಟ ಮುಂದುವರಿಸದೆ ಇರುವುದಕ್ಕೆ ಕೋಳಿವಾಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಬಿಎಂಪಿ ಪರವಾಗಿ ಅಶೋಕ್ ಹಾರ್ನಳ್ಳಿ ಅವರನ್ನು ನೇಮಕ ಮಾಡಿಕೊಂಡು ತಡೆ ತೆರವಿಗೆ ಪ್ರಯತ್ನ ಮಾಡುತ್ತಿದ್ದೀರಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ಬಿಡಿಎ ವಿರುದ್ಧ ಪ್ರಕರಣಗಳು ಇಲ್ಲ ಎಂದು ಅಧಿಕಾರಿಗಳು ಕೋಳಿವಾಡ ಅವರ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ವಿರುದ್ಧ ಹಲವು ಪ್ರಕರಣಗಳು ಬಾಕಿ ಇದ್ದರೂ ತಡೆ ತೆರವಿಗೆ ಅರ್ಜಿ ಹಾಕದಿರುವುದು ಏಕೆ..? ಒತ್ತುವರಿದಾರರ  ಜತೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ..? ಕೆಲ ಪ್ರಕರಣಗಳಲ್ಲಿ ಆರು ತಿಂಗಳಾದರೂ ಏನೂ ಮಾಡಿಲ್ಲ. ಕೋರ್ಟ್‍ನಲ್ಲಿ ನಿಮ್ಮ ವಕೀಲರು ಏನು ಮಾಡುತ್ತಿದ್ದಾರೆ ಎಂದು ಸ್ಪೀಕರ್ ಕೇಳಿದ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು.

► Follow us on –  Facebook / Twitter  / Google+

Facebook Comments

Sri Raghav

Admin