ಕೌಟುಂಬಿಕ ಕಲಹದಿಂದ ನೊಂದ ವ್ಯೆಕ್ತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

channaptnma-death
ಚನ್ನಪಟ್ಟಣ,ಆ.24-ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಮಂಡಿಪೇಟೆ ನಿವಾಸಿ ನಾಗೇಂದ್ರ(28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನು ಕಳೆದ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು , ಕುಟುಂಬ ಸಮೇತರಾಗಿ ಪ್ಯಾಕೇಜ್ ಟೂರ್ ಕೈಗೊಂಡಿದ್ದರು.  ಟೂರಿನಿಂದ ನಿನ್ನೆ ರಾತ್ರಿ ವಾಪಾಸ್ಸಾಗಿದ್ದು , ಪತ್ನಿ ಜೊತೆಗೆ ಜಗಳವಾಡಿದ್ದಾರೆ. ಇದರಿಂದ ಮನನೊಂದು ನಾಗೇಂದ್ರ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನಿಗೆ ಒಂದು ಹೆಣ್ಣು ಮಗುವಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin