ಕೌಟುಂಬಿಕ ಕಲಹ : ಪತ್ನಿ ಮೇಲೆ ಗುಂಡಿನ ದಾಳಿ ನಡೆಸಿದ ಮಾಜಿ ಸೈನಿಕ

ಈ ಸುದ್ದಿಯನ್ನು ಶೇರ್ ಮಾಡಿ

gun-firing

ವಿಜಯಪುರ, ಏ.20-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾಜಿ ಸೈನಿಕ ಪತ್ನಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪತ್ನಿ ಮಹಾದೇವಿಯ ಕಾಲಿಗೆ ಗುಂಡು ತಗುಲಿದ್ದು, ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಾಜಿ ಸೈನಿಕ ಕಾಜಾ ಈ ಕೃತ್ಯ ಎಸಗಿದ್ದು, 12ವರ್ಷಗಳಿಂದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರ ನಡುವೆ ವ್ಯಾಜ್ಯ ನಡೆಯುತ್ತಿತ್ತು.ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಮನೆಯಲ್ಲಿ ಜಗಳ ತೆಗೆದು ಪತ್ನಿ ಮೇಲೆ ದಾಳಿ ಮಾಡಿದ್ದ.ಜೀವನಾಂಶಕ್ಕಾಗಿ ಪತ್ನಿ ಮಹಾದೇವಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಕೋಪಕೊಂಡಿದ್ದ ಕಾಜಾ ಪರವಾನಗಿ ಹೊಂದಿದ್ದ ರಿವಾಲ್ವರ್‍ನಿಂದ ದಾಳಿ ನಡೆಸಿದ್ದಾನೆ.ಆರೋಪಿ ಹಾಗೂ ಆತನ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin