ಕ್ಯಾನ್ಸರ್ ಪೀಡಿತ ಬಾಲಕಿಗೆ ಚಿಕಿತ್ಸೆ ನೆರವು ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

beluru
ಬೇಲೂರು, ಫೆ.18- ಭಗವಂತ ಎಷ್ಟು ಕ್ರೂರಿ ನೋಡಿ… ಹಾಡುತ್ತಾ… ಕುಣಿಯುತ್ತಾ… ಬಾಲ್ಯ ಕಳೆಯಬೇಕಿದ್ದ ಬಾಲಕಿಯ ಕೈ-ಕಾಲು ಸ್ವಾಧೀನ ಕಿತ್ತುಕೊಂಡು ಹಾಸಿಗೆ ಹಿಡಿಯುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ನೋಡಿದರೆ ಎಂತಹವರ ಕರುಳು ಚುರುಕ್ ಎನ್ನದಿರದು..ಎಲ್ಲ ಮಕ್ಕಳಂತೆ ಆಟವಾಡುತ್ತ ಶಾಲೆಯಲ್ಲಿ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ವಿದ್ಯಾರ್ಥಿನಿ ಇಂಚರ ಮಹಾಮಾರಿ ಮೂಳೆ ಕ್ಯಾನ್ಸರ್ ರೋಗದಿಂದ ಕೈ-ಕಾಲುಗಳು ಸ್ವಾಧೀನ ಕಳೆದುಕೊಂಡು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾಳೆ.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಸನ್ಯಾಸಿಹಳ್ಳಿ ಗ್ರಾಮದ ಚಂದ್ರಶೇಖರ, ಮೋಹನ ಕುಮಾರಿ ದಂಪತಿಯ ಹಿರಿಯ ಪುತ್ರಿ ಇಂಚರ (11) ಕ್ಯಾನ್ಸರ್‍ಗೆ ಒಳಗಾಗಿ ಚಿಕಿತ್ಸೆಗಾಗಿ ದಾನಿಗಳ ನೆರವು ಕೋರಿದ್ದಾರೆ.

ಆಟ, ಓದು ಎಲ್ಲದರಲ್ಲೂ ಮುಂದಿದ್ದ ಇಂಚರ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಳು. ದಿನೇ ದಿನೇ ತನ್ನ ಅರಿವಿಗೇ ಬಾರದಂತೆ ಕೈ-ಕಾಲುಗಳ ಸ್ವಾಧೀನ ಕಳೆದುಕೊಳ್ಳುತ್ತಿದ್ದಳು. ಕಳೆದ ಎರಡು ವರ್ಷಗಳ ಹಿಂದೆ ಆಗಾಗ ಸುಸ್ತು, ತಲೆನೋವು ಎನ್ನುತ್ತಿದ್ದಳು. ಪೋಷಕರು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದರು. ತದನಂತರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ಕಳೆದ ಆಗಸ್ಟ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ತೋರಿಸಿದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ತೋರಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದರು. ಅಲ್ಲಿನ ವೈದ್ಯರು 10 ದಿನಗಳ ಕಾಲ ಚಿಕಿತ್ಸೆ ನೀಡಿ ಇನ್ನೂ 20 ದಿನಗಳ ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದರು. ಹೇಳಿ ಕೇಳಿ ಮೊದಲೇ ಬಡವರಾದ್ದರಿಂದ ಇವರು ಹಣವಿಲ್ಲದೆ ವಾಪಸ್ ಬಂದಿದ್ದಾರೆ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೂ ಸ್ವಲ್ಪವೂ ಚೇತರಿಕೆ ಕಂಡುಕೊಂಡಿಲ್ಲ.

ಬಡವರಾದ ನಾವು ಜೀವನ ನಡೆಸುವುದೇ ದುಸ್ತರ. ಇಂತಹ ಸಮಯದಲ್ಲಿ ನಮ್ಮ ಮಗಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳ ನೆರವು ಕೋರಿದ್ದು, ಸಹಾಯ ಮಾಡಲು ಇಚ್ಛಿಸುವವರುಪೋ ಷಕರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಖಾತೆ ಸಂಖ್ಯೆ 64153250664 ಇಲ್ಲಿಗೆ ಹಣ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 8971254127 ಮೊಬೈಲ್‍ಗೆ ಕರೆ ಮಾಡಬಹುದು.ಒಟ್ಟಿನಲ್ಲಿ ಏನೂ ಅರಿಯದ ಮುಗ್ಧ ಬಾಲಕಿ ಗುಣಮುಖಳಾಗಿ ಮೊದಲಿನಂತಾಗಲಿ…

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin