ಕ್ಯಾನ್ಸರ್ ಪೂರ್ವ ಜನ್ಮದ ಪಾಪದ ಫಲ, ಅಸ್ಸಾಂ ಆರೋಗ್ಯ ಸಚಿವರ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

sharma
ಗುವಾಹತಿ, ನ.23-ಕ್ಯಾನ್ಸರ್‍ನಂಥ ಮಾರಕ ರೋಗಗಳಿಂದ ಬಳಲುವ ಜನರು ಹಿಂದೆ ಮಾಡಿದ ಪಾಪಗಳಿಗೆ ಪ್ರತಿಫಲದ ರೂಪದಲ್ಲಿ ಈ ರೋಗವನ್ನು ಅನುಭವಿಸುತ್ತಾರೆ. ಇದು ದೈವಿಕ ನ್ಯಾಯ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ್ ಬಿಸ್ವ ಶರ್ಮಾ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಮಾರಂಭವೊಂದರಲ್ಲಿ ಮಾತನಾಡಿದ ಶರ್ಮಾ, ನಾವು ಮಾಡಿದ ಪಾಪಕ್ಕೆ ದೇವರು ನಮ್ಮನ್ನು ನರಳುವಂತೆ ಮಾಡುತ್ತಾನೆ. ಚಿಕ್ಕವಯಸ್ಸಿನಲ್ಲೇ ಕ್ಯಾನ್ಸರ್‍ನಿಂದ ಮರಣವನ್ನಪ್ಪುವುದು ಅಥವಾ ಅಪಘಾತದಿಂದ ಸಾಯುವುದನ್ನು ನಾವು ನೋಡುತ್ತೇವೆ. ಇದರ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮಗೆ ದೈವಿಕ ನ್ಯಾಯ ಮನವರಿಕೆಯಾಗುತ್ತದೆ. ದೈವಿಕ ನ್ಯಾಯಕ್ಕೆ ಅನುಗುಣವಾಗಿ ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಗೆ ಪ್ರಾಯ:ಶ್ಚಿತ್ತ ಅನುಭವಿಸಲೇಬೇಕು ಎಂದು ಅವರು ಹೇಳಿದ್ದರು.
ಈ ಹೇಳಿಕೆ ಈಗ ವಿವಾದ ಸೃಷ್ಟಿಸಿದ್ದು, ರಾಜಕೀಯ ವಲಯ ಮತ್ತು ಕ್ಯಾನ್ಸರ್ ರೋಗಿಗಳಿಂದ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin