ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಮೈಸೂರಿನತ್ತ ಪ್ರಯಾಣ ಗಜಪಯಣ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

arjun

ಮೈಸೂರು,ಆ.20-ಜಗದ್ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕೇಂದ್ರ ಬಿಂದುವಾದ ಗಜ ಪಯಣ ನಾಳೆ ಆರಂಭವಾಗಲಿದೆ. ಜಿಲ್ಲೆಯ ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಬೆಳಗ್ಗೆ 11 ಗಂಟೆಗೆ ಗಜ ಪಯಣಕ್ಕೆ ಚಾಲನೆ ದೊರೆಯಲಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಆನೆಗಳ ಕ್ಯಾಪ್ಟನ್ ಎಂದೇ ಹೆಸರಾದ ಅರ್ಜುನನ ನೇತೃತ್ವದಲ್ಲಿ ಮೊದಲ ತಂಡದ ಆರು ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.   ತಂಡದಲ್ಲಿ ಬಲರಾಮ, ಅಭಿಮನ್ಯು, ಗಜೇಂದ್ರ, ಕಾವೇರಿ ಹಾಗೂ ವಿಜಯ ಆನೆಗಳು ಆಗಮಿಸುತ್ತಿದ್ದು , ನಾಳೆ ಬೆಳಗ್ಗೆ ವೀರನಹೊಸಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಗಜ ಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಣಸೂರು ಶಾಸಕ ಮಂಜುನಾಥ್ ವಹಿಸಲಿದ್ದು , ದಸರಾ ಕಾರ್ಯಕ್ರಮದ ಇತರೆ ಕಾರ್ಯಕ್ರಮಗಳಿಗೂ ಮುನ್ನವೇ ಅಂದರೆ ಮೊಟ್ಟ ಮೊದಲು ಗಜ ಪಯಣ ಕಾರ್ಯಕ್ರಮ ಆರಂಭವಾಗಲಿದೆ.  ಕಾಡಿನಿಂದ ಹೊರಡುವ ಆನೆಗಳು ಎಲ್ಲ ರೀತಿಯಲ್ಲೂ ಸಿದ್ಧಗೊಂಡು ಜಂಬು ಸವಾರಿಯಲ್ಲಿ ಅಂಬಾರಿ ಹೊತ್ತು ದಸರೆಗೆ ಕಳೆಕಟ್ಟಲಿವೆ.  ನಾಳೆ ಹೊರಡುವ ಆನೆಗಳು ಹಾಗೂ ಮತ್ತೊಂದು ತಂಡದ ಆರು ಆನೆಗಳು ಮೈಸೂರಿನ ಅಲೋಕಕ್ಕೆ ಆಗಮಿಸಲಿದ್ದು , ಒಟ್ಟು 12 ಆನೆಗಳನ್ನು ಇದೇ 26ರಂದು ಮೈಸೂರಿನ ಅರಮನೆಗೆ ಬರಮಾಡಿಕೊಂಡು ಅಗತ್ಯವಿರುವ ತಾಲೀಮು ನಡೆಸಿ ಆನೆಗಳನ್ನು ದಸರಾಗೆ ಸಜ್ಜುಗೊಳಿಸಲಾಗುವುದು.

► Follow us on –  Facebook / Twitter  / Google+

Facebook Comments

Sri Raghav

Admin