ಕ್ಯಾಪ್ಸಿಕಂ ಬೆಳೆದು ಕಂಗಾಲಾದ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಮೇ 19- ಲಾಕ್‍ಡೌನ್ ನಿಂದ ರೈತರು ಬೆಳೆದ ತರಕಾರಿಗೆ ಸೂಕ್ತ ಮಾರುಕಟ್ಟೆ ಸಿಗದೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಇತ್ತ ಬೆಲೆಯೂ ಸಿಗದೆ ಅತ್ತ ಮಾರಾಟ ಮಾಡಲೂ ಸಾಧ್ಯವಾಗದೆ ಹಾಕಿದ ಬಂಡವಾಳದ ಸಿಗದೆ ರೈತರಿಗೆ ದಿಕ್ಕು ತೋಚದಂತಾಗಿದೆ,40ರಿಂದ 100ರೂ.ಗಳ ವೆರೆಗೆ ಮಾರಾಟವಾಗಬೇಕಿದ್ದ ಕ್ಯಾಪಿಕಂ ಕೇವಲ 7ರಿಂದ 20ರೂ.ಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು ರೈತರ ಪರಿಸ್ಥಿತಿ ಅಧೋಗತಿಯಾಗಿದೆ.

ನಗರಕ್ಕೆ 5.ಕಿ.ಮೀ ದೂರದ ವೇದಲವೇಣಿದ ರೈತ ಗಂಗರೆಡ್ಡಿ ಎಂಬುವರು ಎರಡು ಎಕರೆಯಲ್ಲಿ 6ಲಕ್ಷ ವೆಚ್ಚಮಾಡಿ ಕ್ಯಾಪ್ಸಿಕಂ ಬಂಪರ್ ಬೆಳೆ ಬೆಳೆದಿದ್ದು, ಅದು ಸುಮಾರು 30ಲಕ್ಷ ಆದಾಯ ಬರುವ ನಿರೀಕ್ಷೆ ಇತ್ತು.  ಈಗ ಬೆಳೆ ಸಂಪೂರ್ಣ ತೋಟದಲ್ಲಿಯೇ ಕೊಳೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ, ಇದೇ ರೀತಿ ತಾಲೂಕಿನಲ್ಲಿ ಅದೆಷ್ಟೋ ರೈತರ ಪರಿಸ್ಥಿತಿ ಇದೇ ಹಾಗಿದೆ.

# 6ಲಕ್ಷ ಬಂಡವಾಳ ನಷ್ಟ :

ತಾಲೂಕಿನಲ್ಲಿ ನೀರಿನ ಆಶ್ರಯವಿಲ್ಲದೆ ಬೋರ್‍ವೆಲ್‍ನಲ್ಲಿ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ಕಷ್ಟಪಟ್ಟು ಬೆಳೆದಿರುವ ಕ್ಯಾಪ್ಸಿಕಂ ಬಂಪರ್ ಬೆಳೆಯಾಗಿದ್ದರೂ ಸಹ ಮಾರುಕಟ್ಟೆ ಇಲ್ಲದೆ ಬೆಳೆದ ಬೆಳೆಯನ್ನು ಭೂಮಿಗೇ ಹಾಕಿ ಗೊಬ್ಬರ ಮಾಡುವಂತಹ ಸ್ಥಿತಿ ಬಂದಿದೆ.

ಕೊಳೆಯುತ್ತಿರುವ ಕ್ಯಾಪ್ಸಿಕಂ ಬೆಳೆ ತೆಗೆಯಲು ಸುಮಾರು 1ಲಕ್ಷರೂ.ಗಳ ವೆರೆಗೆ ವಚ್ಚ ತಗುಲಲಿದೆ ಎನ್ನುತ್ತಾರೆ ರೈತರು. ಸರಕಾರವೇ ರೈತರು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ಕೊಂಡು ಮಾರುಕಟ್ಟೆ ಮಾಡಿದಾಗ ಮಾತ್ರ ರೈತರ ನಷ್ಟವನ್ನು ತಡೆಯಬಹುದು ಎಂಬ ಅವರ ಅಭಿಪ್ರಾಯದ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ.

Facebook Comments

Sri Raghav

Admin