ಕ್ಯಾಲಿಪೋರ್ನಿಯಾದಲ್ಲಿ ಮಹಿಳೆ ರಕ್ಷಣೆಗೆ ಮುಂದಾದ ತೆಲಂಗಾಣ ಮೂಲದ ಟೆಕ್ಕಿಯ ಗುಂಡಿಟ್ಟು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Vamsi-Chander-Reddy

ವಾರಂಗಲ್,ಫೆ.13– ದರೋಡೆಗೊಳಗಾಗಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಹೋಗಿ ಶಂಕಿತ ಬಂದೂಕುಧಾರಿಗಳು ಹಾರೆಸಿದ ಗುಂಡಿಗೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಸಾಫ್ಟ್ವೇರ್  ಇಂಜಿನಿಯರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ.   ವಾರಂಗಲ್ ಜಿಲ್ಲೆಯ ವಂಗಪಾಡ್ ಗ್ರಾಮದ ವಂಶಿ ಚಂದ್ರರೆಡ್ಡಿ ಎಂಬ ಇಂಜಿನಿಯರ್‍ನನ್ನು ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಸಂಜೆ 4.30ಕ್ಕೆ ಆಗುಂತಕ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.   ಆದರೆ ವಂಶಿ ಚಂದ್ರರೆಡ್ಡಿ ಕುಟುಂಬದ ಸದಸ್ಯರು ಇದನ್ನು ಅಲ್ಲಗೆಳೆದಿದ್ದು , ಅಧ್ಯಕ್ಷ ಟ್ರಂಪ್ ಡೊನಾಲ್ಡ್ ವಿರುದ್ಧ ಪ್ರತಿಭಟನೆ ನಡೆಸಿದ ಪರಿಣಾಮ ಅವರ ಬೆಂಬಲಿಗರು ಈ ರೀತಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಇದೀಗ ವಿದೇಶಾಂಗ ವ್ಯವಹಾರಗಳ ಇಲಾಖೆ ಮೂಲಕ ಮೃತ ದೇಹಗಳನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆಗಳು ಆರಂಭಗೊಂಡಿವೆ.

ಕ್ಯಾಲಿಫೋರ್ನಿಯದಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದು, ಅಪಾರ್ಟ್‍ವೊಂದರಲ್ಲಿ ವಾಸ ಮಾಡುತ್ತಿದ್ದರು. ಕೆಲಸ ನಿಮಿತ್ತ ಸಂಜೆ ಮನೆಯಿಂದ ಹೊರಬಂದಾಗ ಕೆಲ ದುಷ್ಕರ್ಮಿಗಳು ಮಹಿಳೆಯನ್ನು ದೋಚಲು ಯತ್ನಿಸುತ್ತಿದ್ದರು. ಈ ವೇಳೆ ಮಹಿಳೆಯ ರಕ್ಷಣೆಗೆ ಧಾವಿಸಿದ ಚಂದ್ರರೆಡ್ಡಿ ಮೇಲೆ ಅತಿ ಸಮೀಪದಿಂದ ಗುಂಡು ಹಾರಿಸಲಾಗಿದೆ.    ಎದೆ ಭಾಗದಲ್ಲಿ ಎರಡು ಗುಂಡುಗಳು ಹೊಕ್ಕಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತೆಂದು ಸ್ನೇಹಿತರು ತಿಳಿಸಿದ್ದಾರೆ. ಸಂಜೆ 8.30ಕ್ಕೆ ಚಂದ್ರರೆಡ್ಡಿ ಸ್ನೇಹಿತರು ಕುಟುಂಬದ ಸದಸ್ಯರಿಗೆ ಮೊದಲು ನಿಮ್ಮ ಮಗ ಕಾಣೆಯಾಗಿದ್ದಾನೆ ಎಂಬ ಮಾಹಿತಿ ನೀಡಿದ್ದರು. ಕ್ಯಾಲಿಫೋರ್ನಿಯಾದ ಮಿಲ್‍ಪೀಟರ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆಂದು ಹೇಳಿದ್ದರು.

ಅದಾದ ಬಳಿಕ ವಂಶಿ ಚಂದ್ರರೆಡ್ಡಿ ಕುಟುಂಬದ ಸದಸ್ಯರು ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಮ್ಮ ಪತ್ರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವುದು ಖಚಿತಪಡಿಸಿದ್ದಾರೆ.   2015ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದ ಚಂದ್ರರೆಡ್ಡಿ ತದನಂತರ ಎಂ.ಎಸ್ ಮುಗಿಸಿದ ಬಳಿಕ ಇಲ್ಲಿನ ಸಾಫ್ಟ್‍ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin