ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ನೂರಾರು ಮನೆ, ಸಹಸ್ರಾರು ಎಕರೆ ಅರಣ್ಯ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

Wildfire--02

ವೆಂಚುರಾ, ಕ್ಯಾಲಿಫೋರ್ನಿಯಾ, ಡಿ.6-ಅಮೆರಿಕದ ಕ್ಯಾಲಿಫೋರ್ನಿಯಾದ ವೆಂಚುರಾ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ನೂರಾರು ಮನೆಗಳು ಆಹುತಿಯಾಗಿವೆ. ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಹೆದರಿ ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ಪಲಾಯನವಾಗಿದ್ದಾರೆ. ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚಿನೊಂದಿಗೆ ಅಧಿಕ ಉಷ್ಣಾಂಶ, ಶುಷ್ಕ ವಾತಾವರಣ ಮತ್ತು ಬಲವಾದ ಗಾಳಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.

ವೆಂಚುರಾದ ಪರ್ವತ ತಪ್ಪಲಿನ ಪ್ರದೇಶದಲ್ಲಿ ಸೋಮವಾರ ಸಂಜೆಯಿಂದ ಕಾಣಿಸಿಕೊಂಡ ಥಾಮಸ್ ಫೈರ್ ಎಂಬ ಕಾಡ್ಗಿಚ್ಚಿನ ರುದ್ರನರ್ತನ ಸುತ್ತಮುತ್ತ ಪ್ರದೇಶಗಳಿಗೂ ವ್ಯಾಪಿಸಿ ನೂರಾರು ಮನೆಗಳನ್ನು ಆಪೋಶನ ತೆಗೆದುಕೊಂಡಿದೆ. ಅಲ್ಲದೇ ಬೆಂಕಿ ಜ್ವಾಲ್ವೆಗಳಿಗೆ 50,000 ಎಕರೆಗಳಿಗೂ ಹೆಚ್ಚು ಪ್ರದೇಶ ಸುಟ್ಟು ಬೂದಿಯಾಗಿದೆ.  ಕ್ಯಾಲಿಫೋರ್ನಿಯಾ ರಾಜ್ಯಪಾಲ ಜೆರ್ರಿ ಬ್ರೌನ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. 1,000ಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಅಗ್ನಿಯ ಪ್ರಕೋಪವನ್ನು ನಂದಿಸಲು ಹಗಲಿರುಳು ಹರಸಾಹಸ ಮಾಡುತ್ತಿದ್ದಾರೆ.

Facebook Comments

Sri Raghav

Admin