ಕ್ಯಾಲಿಫೋರ್ನಿಯಾದ ಓರೋವಿಲ್ ಅಣೆಕಟ್ಟು ಕುಸಿಯುವ ಭೀತಿ : 2 ಲಕ್ಷ ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Dam--01

ಓರೋವಿಲ್, ಫೆ.14- ಅಮೆರಿಕದ ನಾರ್ತ್ ಕ್ಯಾಲಿಫೋರ್ನಿಯಾದಲ್ಲಿರುವ ಲೇಕ್ ಓರೋವಿಲ್ ಅಣೆಕಟ್ಟಿನ ತುರ್ತು ದ್ವಾರವೊಂದು ಕುಸಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಒಡೆಯುವ ಆತಂಕ ಎದುರಾಗಿದೆ. ಈ ಅಪಾಯ ಪರಿಸ್ಥಿತಿ ಹಿನ್ನೆಲೆಯಲ್ಲಿ, ಫೆದರ್ ನದಿಯುದ್ದಕ್ಕೂ ವಾಸಿಸುತ್ತಿರುವ ಗ್ರಾಮೀಣ ಪ್ರದೇಶಗಳಿಗೆ ನೀರು ನುಗ್ಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೆಳ ಪ್ರದೇಶದಲ್ಲಿ ವಾಸಿಸುವ ಸುಮಾರು ಎರಡು ಲಕ್ಷ ಜನರಿಗೆ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.   ಓರೋವಿಲ್ ಅಣೆಕಟ್ಟು ಸುತ್ತಮುತ್ತ ವಾಸಿಸುತ್ತಿರುವ ಜನರಿಗೆ ಈ ಬಗ್ಗೆ ತುರ್ತು ಆದೇಶ ನೀಡಲಾಗಿದೆ. ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರವುವಂತೆ ಸೂಚಿಸಲಾಗಿದೆ ಎಂದು ಬ್ಯೂಟ್ ಕೌಂಟಿ ಷರೀಫ್ (ಸ್ಥಳೀಯ ಪೊಲೀಸ್ ಮುಖ್ಯಸ್ಥ) ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin