ಕ್ಯಾಲಿಫೋರ್ನಿಯಾ ನಗರದ ಮೇಯರ್ ಆಗಿ ಸವಿತಾ ಪದಗ್ರಹಣ

ಈ ಸುದ್ದಿಯನ್ನು ಶೇರ್ ಮಾಡಿ

Savitha-01

ವಾಷಿಂಗ್ಟನ್, ಡಿ.16-ಅಮೆರಿಕ ಕ್ಯಾಲಿಫೋರ್ನಿಯಾದ ಕುಪೆರ್‍ಟಿನೋ ನಗರದ (ಆಪಲ್ ಕೇಂದ್ರ) ಮೇಯರ್ ಆಗಿ ಭಾರತೀಯ ಮೂಲದ ಸವಿತಾ  ವೈದ್ಯನಾಥನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಈ ಹುದ್ದೆ ಅಲಂಕರಿಸಿರುವುದು ಇದೇ ಮೊದಲು. ಇದರೊಂದಿಗೆ ವಿಶ್ವದ ಮಹಾ ಶಕ್ತಿಶಾಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರ ಪ್ರಾಬಲ್ಯ ಮುಂದುವರಿದಂತಾಗಿದೆ. ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಎಂಬಿಎ ಪದವೀಧರೆಯಾದ ಸವಿತಾ  ಕೆಲಕಾಲ ವಾಣಿಜ್ಯ ಬ್ಯಾಂಕ್ ಮತ್ತು ಸೇವಾ ಆಡಳಿತ ಸಂಸ್ಥೆಯಲ್ಲಿ ಅಧಿಕಾರಿಯೂ ಆಗಿದ್ದರು.

ವಾಷಿಂಗ್ಟನ್‍ನಲ್ಲಿ ನಡೆದ ಸಮಾರಂಭವೊಂದರಲ್ಲಿ ಸವಿತಾ  ಕ್ಯಾಲಿಫೋರ್ನಿಯಾದ ಕುಪೆರ್‍ಟಿನೋ ನಗರದ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತದಿಂದ ತೆರಳಿದ್ದ ಅವರ ತಾಯಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ನಗರದಲ್ಲಿ ಶಿಕ್ಷಣ ಸುಧಾರಣೆ ಪ್ರಥಮಾದ್ಯತೆ ನೀಡುವುದಾಗಿ ತಿಳಿಸಿದರು.

ಸಲಹಾ ಸಮಿತಿಗೆ ನೇಮಕ :

ಅಮೆರಿಕ ವಾಣಿಜ್ಯ ಇಲಾಖೆಯ ನಾಗರಿಕ ಪರಮಾಣು ವಾಣಿಜ್ಯ ಸಲಹಾ ಸಮಿತಿಗೆ(ಸಿಐಎನ್‍ಟಿಎಸಿ) ಸದಸ್ಯರಾಗಿ ಭಾರತೀಯ ಮೂಲದ ವಾಣಿಜ್ಯ ಪರಿಣಿತ ವಿಜಯ್ ಸಾಜಾವಾಲ್ ಮರು ನೇಮಕಗೊಂಡಿದ್ದಾರೆ. ಭಾರತ-ಅಮೆರಿಕ ನಾಗರಿಕ ಪರಮಾಣು ವ್ಯವಹಾರದ ಸಂಪರ್ಕ ಸೇತುವೆಯಾಗಿದ್ದ ಇವರ ಹೆಸರನ್ನು ವಾಣಿಜ್ಯ ಸಚಿವ ಪೆನ್ನಿ ಪ್ರಿಟ್ಜ್‍ಕರ್ ಘೋಷಿಸಿದ್ದಾರೆ. ಇವರೊಂದಿಗೆ ಇತರ 38 ಸದಸ್ಯರನ್ನೂ ಸಮಿತಿಗೆ ನೇಮಕ ಮಾಡಲಾಗಿದೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin