ಕ್ಯಾಲಿಫೋರ್ನಿಯಾ ವೀಕೆಂಡ್ ರೇವ್ ಪಾರ್ಟಿಯಲ್ಲಿ ಬೆಂಕಿ ದುರಂತ : 40 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

40-Killed

ಓಕ್‍ಲ್ಯಾಂಡ್, ಡಿ.4-ವಾರಾಂತ್ಯದ ಅನಧಿಕೃತ ರೇವ್ ಪಾರ್ಟಿಯೊಂದರಲ್ಲಿ ಭೀಕರ ಅಗ್ನಿ ದುರಂತದಿಂದಾಗಿ 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ಅನೇಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಸಮೀಪದ ವೇರ್‍ಹೌಸ್‍ನಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 24 ಮಂದಿ ಕಣ್ಮರೆಯಾಗಿದ್ದಾರೆ.  ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಈ ಅಕ್ರಮ ಕಟ್ಟಡದ ಮೇಲ್ಭಾವಣಿ ಕುಸಿದು ಬಿತ್ತು. ಅಲ್ಲದೇ ಈ ಸ್ಥಳದಲ್ಲಿ ದಹನಶೀಲ ವಸ್ತುಗಳಿದ್ದ ಕಾರಣದಿಂದ ಬೆಂಕಿ ಜ್ವಾಲೆಗಳು ಕ್ಷಿಪ್ರವಾಗಿ ಪಸರಿಸಿತು. ದುರಂತ ಸಂಭವಿಸಿದಾಗ ಸುಮಾರು 100 ಮಂದಿ ಒಳಗೆ ಎಲೆಕ್ಟ್ರಾನಿಕ್ ಡ್ಯಾನ್ ಮ್ಯೂಸಿಕ್ ಪಾರ್ಟಿಯಲ್ಲಿ ತಲ್ಲೀನರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40-Killed-1

ದುರಂತದ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಹು ಪ್ರಯಾಸದಿಂದ ಬೆಂಕಿಯ ಕೆನ್ನಾಲಿಗಳನ್ನು ನಂದಿಸಿದರು. ಈಗಾಗಲೇ ಕೆಲವರ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಈ ದುರ್ಘಟನೆಯಲ್ಲಿ ಕನಿಷ್ಠ ಎರಡು ಡಜನ್ ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ಓಕ್‍ಲ್ಯಾಂಡ್‍ನ ಗೋದಾಮಿನ ಕಟ್ಟಡದಲ್ಲಿ ಉಳಿಯಲು ಅಥವಾ ಕೆಲಸ ಮಾಡಲು ಸಾರ್ವಜನಿಕರಿಗೆ ಅನುಮತಿ ಇರಲಿಲ್ಲ. ಆದರೆ ಕಲಾವಿದರ ಗುಂಪೊಂದು ನಿನ್ನೆ ರಾತ್ರಿ ಈ ಉಗ್ರಾಣದಲ್ಲಿ ರೇವ್ ಪಾರ್ಟಿ ಆಯೋಜಿಸಿತ್ತು. ಈ ಕಟ್ಟಡದಲ್ಲಿ ಧೂಮ ಪತ್ತೆ ಸಾಧನ ಕೂಡ ಇರಲಿಲ್ಲ. ಈ ಕಟ್ಟಡದ ಒಳಗೆ ಮೋಜು-ಮೇಜುವಾನಿ ನಡೆಸಲು ಅಕ್ರಮ ನಿರ್ಮಾಣವೊಂದು ತಲೆಎತ್ತುತ್ತಿದೆ. ಅಲ್ಲದೇ ಅಕ್ಕಪಕ್ಕದ ಸ್ಥಳಗಳಲ್ಲಿ ಕಸದ ರಾಶಿಗಳನ್ನು ಸುರಿಯಲಾಗುತ್ತಿದೆ ಎಂದು ಇತ್ತೀಚೆಗೆ ದೂರುಗಳು ಬಂದಿದ್ದವು ಎಂದು ಓಕ್‍ಲ್ಯಾಂಡ್ ಪ್ಲಾನಿಂಗ್ ಇಲಾಖೆಯ ಮುಖ್ಯಸ್ಥ ಡರೇನ್ ರಾನೆಲ್ಲಿಟ್ಟಿ ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin