ಕ್ಯಾಶ್ ಲೆಸ್ ವ್ಯವಹಾರಕ್ಕೆ ಬಂತು ‘ಭೀಮ’ಬಲ

ಈ ಸುದ್ದಿಯನ್ನು ಶೇರ್ ಮಾಡಿ

Bheem

ನವದೆಹಲಿ ಡಿ.30 : ‘ಡಿಜಿಟಲ್ ಇಂಡಿಯಾ’, ಕಲ್ಪನೆಯನ್ನು ಸಾಕಾರಗೊಳಿಸುವ  ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಸರ್ಕಾರದಿಂದಲೇ ನೂತನ ಆ್ಯಪ್ ಬಿಡುಗಡೆ ಮಾಡಿದೆ.  ಡಿಜಿಟಲ್ ಪೇಮೆಂಟ್ ಮಾಡಲು ಮತ್ತೊಂದು ಆ್ಯಪ್ ಬಿಡುಗಡೆಯಾಗಿದೆ. ದೆಹಲಿಯಲ್ಲಿ ನಡೆದ ಡಿಜಿಧನ್ ಮೇಳಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಮೊಬೈಲ್ ಆ್ಯಪ್ ನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಡಾ.ಬಿ.ಆರ್ ಅಂಬೇಡ್ಕರ್ ಹೆಸರಿನ ಹೊಸ ಭೀಮ್ ಆಪ್ ಯೋಜನೆ ಬಿಡುಗಡೆ ಮಾಡಿದ ಪ್ರಧಾನಿ, ಭಾರತದ ಮಟ್ಟಿಗೆ ಇದು ಹೊಸ ಆವಿಷ್ಕಾರ ಎಂದರು. ಬಯೋಮೆಟ್ರಿಕ್ ಆಧಾರಿತ ಭೀಮ್ ಆಪ್ ಡಿಜಿಟಲ್ ಪೇಮೆಂಟ್ ಗೆ ರಹದಾರಿಯಾಗಲಿದೆ. ಭೀಮ್ ಆಪ್ ನಿಮ್ಮ ಹೆಬ್ಬೆಟ್ಟನ್ನು ನಿಮ್ಮ ಬ್ಯಾಂಕ್ ಆಗಿ ಮಾಡಲಿದ್ದು, ಈ ಆಪ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದರು. (ಭೀಮ್ ಆಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ..? (ಇಲ್ಲಿದೆ ನೋಡಿ ವಿಡಿಯೋ) )

ಇಂದು ದೆಹಲಿಯಲ್ಲಿ ಡಿಜ್ ಧನ್ ಮೇಳದಲ್ಲಿ ಭೀಮ್ ಆಪ್ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಲಕ್ಕಿ ಗ್ರಾಹಕ ಯೋಜನೆಯಲ್ಲಿ ಡ್ರಾ ಮೂಲಕ ನಗದು ರಹಿತ ವ್ಯವಹಾರ ನಡೆಸಿದ ಗ್ರಾಹಕನನ್ನು ಆಯ್ಕೆ ಮಾಡಿ ಒಂದು ಕೋಟಿ ರುಪಾಯಿ ಬಹುಮಾನ ನೀಡಲಾಗವುದು. ಈ ಯೋಜನೆ 100 ದಿನಗಳ ಕಾಲ ಜಾರಿಯಲ್ಲಿರಲಿದ್ದು, ಏಪ್ರಿಲ್ 14ರಂದು 1 ಕೋಟಿ ಬಹುಮಾನ ವಿಜೇತರನ್ನು ಘೋಷಿಸಲಾಗುವುದು ಎಂದರು. ಅಲ್ಲದೆ ವಿಜೇತರ ಹೆಸರನ್ನು www.Digidhanmygov.in  ಪ್ರಕಟಿಸಲಾಗುವುದು ಎಂದು ತಿಳಿಸಿದರು.

ದೇಶವನ್ನು ಸುಭದ್ರ ನಗದು ರಹಿತ ಆರ್ಥಿಕತೆಯನ್ನಾಗಿ ಬೆಳೆಸುವ ದಿಶೆಯಲ್ಲಿ ಜನರು ಹೆಚ್ಚೆಚ್ಚು ಡಿಜಿಟಲ್ ಪೇಮೆಂಟ್ ಮಾಡಬೇಕು, ಭೀಮ್ ಎಂಬ ಹೆಸರಿನ ಈ ಹೊಸ ಆಪ್ ನಿಂದ ಜನರಿಗೆ ಮತ್ತು ಸರಕಾರಕ್ಕೆ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದಕ್ಕೆ ಭೀಮ ಬಲ ದೊರಕಿದಂತಾಗಿದೆ ಎಂದರು.
ಲಕ್ಕಿ ಗ್ರಾಹಕ ಯೋಜನೆಯಡಿ ದಿನಕ್ಕೆ 50 ರು.ಗಳಿಂದ 3,000 ರು.ಗಳ ವರೆಗೆ ಡಿಜಿಟಲ್ ಪೇಮೆಂಟ್ ಮಾಡುವ 15,000 ಜನರು ನಿತ್ಯ 1,000 ರು. ಗೆಲ್ಲಬಹುದಾಗಿದೆ.

ಹೆಬ್ಬಟ್ಟಿಗೆ ಭೀಮ ಬಲ : 

ಅನಕ್ಷರಸ್ಥರನ್ನು ಹೆಬ್ಬಟ್ಟು ಎಂದು ಕರೆಯಲಾಗುತ್ತಿತ್ತು. ನಿಮ್ಮ ಹೆಬ್ಬೆಟ್ಟು ಇನ್ನು ಮುಂದೆ ನಿಮ್ಮ ಬ್ಯಾಂಕ್ ಆಗಲಿದೆ. ಹೆಬ್ಬೆರಳಿದ್ದರೆ ಸಾಕಿ ಎಲ್ಲ ತರಹ ವ್ಯವಹಾರ ನಡೆಸಬಹುದು. ಈ ಹೊಸ ಆ್ಯಪ್ ನಲ್ಲಿ ಹೆಬ್ಬೆಟ್ಟು ಒತ್ತುವುದರ ಮೂಲಕ ವಹಿವಾಟು ನಡೆಯುತ್ತದೆ. ಇಂದು ಭೀಮ್ ಆ್ಯಪ್ ಬೀಡುಗಡೆಯಾಗಿದ್ದು, ಈ ಆ್ಯಪ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಜಗತ್ತಿನ ಅತ್ಯದ್ಭುತ ಆಪ್ ಗಳಲ್ಲಿ ಭೀಮ್ ಆ್ಯಪ್ ಒಂದಾಗಲಿದೆ. ಅಂಬೇಡ್ಕರ್ ಬಹುಜನರ ಹಿತ ಬಹುಜನರಿಗೆ ಸುಖ ಎಂದಿದ್ದರು. ಇನ್ನು ಮುಂದೆ ಭಾರತದಲ್ಲಿ ಹೆಬ್ಬೆಟ್ಟೆಂದರೆ ಅಭಿವೃದ್ಧಿ ಸಂಕೇತವಾಗಿದೆ. ಬಯೋಮೆಟ್ರಿಕ್ ಮೂಲಕ ಆ್ಯಪ್ ನಲ್ಲಿ ಎಲ್ಲಾ ವ್ಯವಹಾರ ನಡೆಯಲಿದೆ ಎಂದು ಪ್ರದಾನಿ ಹೇಳಿದ್ದಾರೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ವ್ಯಾಪಾರಿಗಳು ತಮ್ಮ ಅಂಡ್ರಾಯ್ಡ್ ಫೋನ್ ಗೆ ಆಧಾರ್ ನಗದುರಹಿತ ಮರ್ಚೆಂಟ್ ಆಯಪನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಯೋಮೆಟ್ರಿಕ್ ರೀಡರನ್ನು ಕನೆಕ್ಟ್ ಮಾಡಬೇಕು. ನಂತರ ತಮ್ಮ ಆಧಾರ್ ಸಂಖ್ಯೆಯನ್ನು ಫೀಡ್ ಮಾಡಬೇಕು. ಬಳಿಕ ನೀವು ವ್ಯವಹರಿಸುವ ಬ್ಯಾಂಕ್ ಶಾಖೆಯನ್ನು ಆಯ್ಕೆ ಮಾಡಬೇಕು. ಆಗ ಒಂದು ಅಧಿಕೃತ ಪಾಸ್ ವರ್ಡನ್ನು ಬಯೋಮೆಟ್ರಿಕ್ ನೀಡಲಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin