ಕ್ಯಾಷ್‍ಲೆಸ್ ಕಡೆಗೆ ಕೆಎಸ್‍ಆರ್‍ಟಿಸಿ : 17000 ಬಸ್, 450 ಬಸ್ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cashless-KSRTC

ಬೆಂಗಳೂರು, ಡಿ.6-ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಗದು ರಹಿತ (ಕ್ಯಾಷ್‍ಲೆಸ್) ಯೋಜನೆಯನ್ನು ಸಾಕಾರಗೊಳಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.
ಶೀಘ್ರದಲ್ಲಿ ರಾಜ್ಯದ 17000 ಬಸ್ ಹಾಗೂ 450 ಬಸ್ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಇದರ ಜೊತೆಗೆ ಸಾರ್ವಜನಿಕರು ಚಿಲ್ಲರೆ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಬಸ್‍ಗಳಲ್ಲಿ ಕಾರ್ಡ್ ಬಳಕೆ ಸೌಲಭ್ಯ ಸಿಗಲಿದೆ.  ಮೊದಲ ಹಂತದಲ್ಲಿ 17,000 ಬಸ್‍ಗಳು ಮತ್ತು 450 ಪ್ರಮುಖ ಬಸ್‍ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಲಿದ್ದೇವೆ. ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸುವ ಮೊದಲ ಹಂತ ಇದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

8317 ಕೆಎಸ್‍ಆರ್‍ಟಿಸಿ, 957 ಪ್ರೀಮಿಯಮ್, 4785ವಾಯುವ್ಯ, 157ಪ್ರೀಮಿಯಮ್, 4346 ಕೆಎಸ್‍ಆರ್‍ಟಿಸಿ, 142 ಪ್ರೀಮಿಯಮ್, ಈಶಾನ್ಯ ವಿಭಾಗದ ಬಸ್‍ಗಳಿಗೆ ಅಳವಡಿಸಲಾಗುವುದು.
ಇದೇ ರೀತಿ 156 ಕೆಎಸ್‍ಆರ್‍ಟಿಸಿ ನಿಲ್ದಾಣ, 160 ವಾಯುವ್ಯ ಹಾಗೂ 136 ಈಶಾನ್ಯ ವಿಭಾಗದ ಬಸ್ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಪ್ರಯಾಣಿಕರಿಗೆ ಸಿಗಲಿದೆ.  ಜ.23 ರಿಂದ ಈ ಯೋಜನೆ ಆರಂಭವಾಗಲಿದೆ. ಬೆಂಗಳೂರು, ಹಾಸನ, ಮಂಡ್ಯ, ಮೈಸೂರು, ಮಡಿಕೇರಿ, ಧರ್ಮಸ್ಥಳ, ಕುಂದಾಪುರ, ಶಿವಮೊಗ್ಗ, ಹರಿಹರ, ದಾವಣಗೆರೆ, ತುಮಕೂರು, ಕೋಲಾರ, ಚಿತ್ರದುರ್ಗ ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಲಿವೆ.

ಬಸ್ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವ ಬಗ್ಗೆ ಪೈಲಟ್ ಸಮೀಕ್ಷೆ ನಡೆಸಲಾಗಿತ್ತು. ಖಾಸಗಿ ಬಸ್‍ಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಹಾಗೂ ಪ್ರಯಾಣಿಕರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಈ ಸೌಲಭ್ಯ ನೀಡಲಾಗುವುದೆಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈಗಾಗಲೇ ಕೆಲವು ಬಸ್‍ಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ಇದರ ಜೊತೆಗೆ ಕ್ಯಾಷ್‍ಲೆಸ್‍ಗೂ ಒತ್ತು ನೀಡಲಾಗುತ್ತಿದೆ. ಪ್ರಯಾಣಿಕರ ಚಿಲ್ಲರೆ ಸಮಸ್ಯೆ ಹಲವಾರು ಬಾರಿ ಕಿರಿಕಿರಿ ತಂದಿದೆ. ಹೀಗಾಗಿ ಇನ್ನು ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin