ಕ್ರಷರ್ ಮಷಿನ್‍ಗಳ ಧೂಳಿಗೆ ಆಕ್ರೋಶ : ಸಂಪರ್ಕ ರಸ್ತೆ ಅಗೆದು ಗ್ರಾಮಸ್ಥರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

7
ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಚಟುವಟಿಕೆಯನ್ನು ನಾವು ವಿರೋಧಿಸುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ಚಟುವಟಿಕೆ ನಡೆಸಿದರೆ ಅಭ್ಯಂತರವಿಲ್ಲ. ಆದರೆ ಇಡೀ ದಿನ ಕ್ರಷರ್‍ಗಳ ಸಪ್ಪಳ, ಧೂಳಿನಿಂದಗಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಬೇಕು.
-ಆಲಕೊಪ್ಪರ ಗ್ರಾಮಸ್ಥರು

ಮುದ್ದೇಬಿಹಾಳ,ಫೆ.18- ಕ್ರಷರ್‍ಗಳ ಧೂಳಿನಿಂದಾಗಿ ಗ್ರಾಮದಲ್ಲಿ ಉಣ್ಣುವ ಅನ್ನದಲ್ಲೂ ಮಣ್ಣು ಬಂದು ಬೀಳುತ್ತಿದ್ದು ಸರಿಯಾಗಿ ಕಡಿ ಹಾಗೂ ಕ್ರಷರ್ ಮಷಿನ್‍ನ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳದ ಕ್ರಷರ್‍ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಆಲಕೊಪ್ಪರ-ಅಗಸಬಾಳ ರಸ್ತೆಯನ್ನು ಅಗೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಆಲಕೊಪ್ಪರ ಗ್ರಾಮದಲ್ಲಿ ಜರುಗಿದೆ.ಪ್ರತಿನಿತ್ಯ ಇಲ್ಲಿ 40-50 ಟಿಪ್ಪರ್ ವಾಹನಗಳು ಕಡಿ ಹಾಗೂ ಕಲ್ಲು ಪುಡಿಯನ್ನು ತುಂಬಿಕೊಂಡು ಆಲಕೊಪ್ಪರ ಗ್ರಾಮದ ಸಂಪರ್ಕ ರಸ್ತೆಗೆ ಬರುತ್ತವೆ. ಗ್ರಾಮದಿಂದ ಅನತಿ ದೂರದಲ್ಲಿರುವ ಕ್ರಷರ್ ಮಷಿನ್‍ಗಳಿಂದ ಹಾರುವ ಧೂಳು ಇಡೀ ಗ್ರಾಮದೆಲ್ಲೆಲ್ಲಾ ಆವರಿಸುತ್ತಿದ್ದು ಈ ಸಮಸ್ಯೆ ತಲೆನೋವಿಗೆ ಕಾರಣವಾಗಿದೆ ಎಂದು ಹೇಳಿದರು.
ಬೆಳಗ್ಗೆ 6ಗಂಟೆಗೆ ರಸ್ತೆ ಅಗೆದು ಸಂಚಾರ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಎರಡೂ ಕಡೆ ಓಡಾಡುವ 30-40 ಟಿಪ್ಪರ್ ವಾಹನಗಳು ಪಟ್ಟಣದ ಬಸವನ ಬಾಗೇವಾಡಿ ರಸ್ತೆಯಲ್ಲಿಯೇ ನಿಂತುಕೊಂಡವು. ವಿಷಯ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಧಾವಿಸಿದ ಕ್ರಷರ್ ಮಷಿನ್‍ಗಳ ಮಾಲೀಕರು ಗ್ರಾಮಸ್ಥರ ಅಹವಾಲು ಆಲಿಸಿದರು.ಕ್ರಷರ್ ಮಷಿನ್‍ನಲ್ಲಿಯೇ ನೀರು ಹಾಕಿ ಕಡಿ ತಯಾರಿಸುವುದು, ರಸ್ತೆಗೆ ಟ್ಯಾಂಕ್ ಮೂಲಕ ನೀರು ಹೊಡೆದು ಧೂಳು ಹಾರದಂತೆ ನೋಡಿಕೊಂಡರೆ ನಮ್ಮ ಅಭ್ಯಂತರವಿಲ್ಲ. ಆದರೆ ಬೇಕಾಬಿಟ್ಟಿಯಾಗಿ ನೀರು ಹೊಡೆದು ವಾಹನ ಚಲಾಯಿಸಿಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರೊಬ್ಬರು ಕ್ರಷರ್ ಮಷಿನ್ ವಾಹನದ ಚಾಲಕರಿಗೆ ಈ ರಸ್ತೆಯಲ್ಲಿ ನೋಡಿಕೊಂಡು ವಾಹನ ಚಲಾಯಿಸುವಂತೆ ಕೇಳಿದರೆ ಉಡಾಫೆಯಿಂದ ಮಾತನಾಡುತ್ತಾರೆ. ಅವರ ದರ್ಪ ಮೀತಿ ಮೀರಿದೆ. ಕೇಳಲು ಹೋದ ರೈತರ ಮೇಲೆ ವಾಹನ ಹಾಯಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಕ್ರಷರ್ ಮಷಿನ್ ಮಾಲೀಕರು ಈಗಾಗಲೇ ನಿಮ್ಮೂರಿನ ಓರ್ವ ವ್ಯಕ್ತಿಯೇ ಧೂಳು ಹಾರದಂತೆ ರಸ್ತೆಗೆ ನೀರು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅವಶ್ಯವಿದ್ದರೆ ಹೆಚ್ಚುವರಿಯಾಗಿ ಇನ್ನೊಂದು ಟ್ಯಾಂಕರ್‍ನಿಂದ ನೀರು ಹರಿಸಲು ಸಿದ್ಧರಿರುವುದಾಗಿ ಹೇಳಿದರಲ್ಲದೇ ಕಡಿಯಲ್ಲಿ ನೀರು ಮಿಶ್ರಣ ಮಾಡಿ ಕ್ರಷಿಂಗ್ ಮಾಡುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin