ಕ್ರಿಕೆಟ್ ಜೀವನಕ್ಕೆ ಎಲೆಟ್ ಗುಡ್‍ಬೈ

ಈ ಸುದ್ದಿಯನ್ನು ಶೇರ್ ಮಾಡಿ

Grant-Elliott

ವೆಲ್ಲಿಂಗ್ಟನ್, ಮಾ. 31– 2015ರ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 84 ರನ್‍ಗಳನ್ನು ಗಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಫೈನಲ್‍ಗೇರಿಸಿದ್ದ ಆಟಗಾರ ಎಲೆಟ್ ಅವರು ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ.  ವಿಶ್ವಕಪ್ ಸೆಮಿಫೈನಲ್‍ನಲ್ಲಿ ಮಾತ್ರವಲ್ಲದೇ ಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ 83 ರನ್‍ಗಳಿಸಿ ಮಿಂಚಿದ್ದ ಎಲೆಟ್ 83 ಏಕದಿನ ಪಂದ್ಯಗಳಿಂದ 1976 ರನ್, 5 ಟೆಸ್ಟ್‍ಗಳಿಂದ 86 ರನ್ ಹಾಗೂ 16 ಟ್ವೆಂಟಿ-20 ಪಂದ್ಯಗಳಿಂದ 157 ರನ್‍ಗಳನ್ನು ಗಳಿಸಿದ್ದಾರೆ.

ನಿವೃತ್ತಿ ಘೋಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರ್ಯಾಂಟ್ ಎಲೆಟ್ , ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ನಾನು ನ್ಯೂಜಿಲೆಂಡ್ ತಂಡದ ಪರ ಆಡಿದ ಪ್ರತಿಯೊಂದು ಕ್ಷಣವು ನನಗೆ ಉತ್ತಮ ಅನುಭವಗಳನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin