ಕ್ರಿಕೆಟ್ ನಿಯಮಾವಳಿಗಳಲ್ಲಿ ಭಾರಿ ಬದಲಾವಣೆ..!

ಈ ಸುದ್ದಿಯನ್ನು ಶೇರ್ ಮಾಡಿ

Crickt--01

ನವದೆಹಲಿ, ಸೆ.26- ಕ್ರಿಕೆಟ್‍ನ ಮೂರು ಮಾದರಿಯಲ್ಲೂ ಈಗಿರುವ ನಿಯಮಗಳಲ್ಲಿ ಐಸಿಸಿ ಭಾರೀ ಬದಲಾವಣೆ ಮಾಡಿದ್ದು ಸೆಪ್ಟೆಂಬರ್ 28 ರಿಂದಲೇ ಜಾರಿಗೆ ಬರುವಂತೆ ನಿಯಮ ರೂಪಿಸಿದೆ. ಬ್ಯಾಟ್ಸ್‍ಮನ್‍ಗಳು ಬಳಸುವ ಬ್ಯಾಟ್ಸ್‍ನ ಸಾಂದ್ರತೆ, ಕ್ರೀಡಾಂಗಣದಲ್ಲಿ ಆಟಗಾರನ ವರ್ತನೆ, ಡಿಆರ್‍ಎಸ್ ನಿಯಮ, ರನೌಟ್ , ಕ್ಯಾಚ್‍ಗಳು ಸೇರಿದಂತೆ ಎಲ್ಲ ವಿಭಾಗಳಲ್ಲೂ ಭಾರೀ ಬದಲಾವಣೆಯನ್ನು ತಂದಿದೆ.

ಈ ನಿಯಮದ ಪ್ರಕಾರ ಬ್ಯಾಟ್ಸ್‍ಮನ್ ತಾನು ಬಳಸುವ ಬ್ಯಾಟ್‍ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಕೂಡ ಬ್ಯಾಟ್‍ನ ತುದಿಯಲ್ಲಿ 40 ಎಂಎಂ ಮೊನಚಾಗಿರಬೇಕು ಮತ್ತು ಒಟ್ಟಾರೆ 67 ಎಂಎಂ ಮೊನಚನ್ನು ಮೀರಬಾರದು. ಆಟದ ಮಧ್ಯೆ ಬ್ಯಾಟ್‍ಗಳನ್ನು ಬದಲಾಯಿಸಬೇಕಾದರೆ ಅಂಪೈರ್‍ಗಳ ಒಪ್ಪಿಗೆಯನ್ನು ಪಡೆಯಲೇಬೇಕು ಎಂಬುದು ಸೇರಿದಂತೆ ಅನೇಕ ಬದಲಾವಣೆಗಳನ್ನು ಸೂಚಿಸಿದ್ದು ಈ ನಿಯಮ ಬರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಅನ್ವಯವಾಗಲಿದೆ ಎಂದು ಐಸಿಸಿ ಮಂಡಳಿ ತಿಳಿಸಿದೆ.

Facebook Comments

Sri Raghav

Admin